ಸಾಮಾನ್ಯವಾಗಿ ಮೂಲಂಗಿಯನ್ನು ಸಾಂಬಾರ್ ಅಥವಾ ಪಲ್ಯದಲ್ಲಿ ಮಾತ್ರ ಬಳಸುತ್ತೇವೆ. ಆದರೆ ಅದರಿಂದ ಮಾಡಬಹುದಾದ ಚಟ್ನಿ ಕೂಡ ತುಂಬಾ ರುಚಿಯಾಗಿದ್ದು, ಅನ್ನ, ದೋಸೆ, ಇಡ್ಲಿ ಜೊತೆ ಅದ್ಭುತವಾಗಿ ಹೊಂದುತ್ತದೆ. ತುಸು ಖಾರ–ಹುಳಿ ರುಚಿಯಿರುವ ಈ ಮೂಲಂಗಿ ಚಟ್ನಿ ಕಡಿಮೆ ಸಮಯದಲ್ಲಿ ಸಿದ್ಧವಾಗುವ ಆರೋಗ್ಯಕರ ಡಿಶ್.
ಬೇಕಾಗುವ ಪದಾರ್ಥಗಳು:
ಮೂಲಂಗಿ – 1 ಕಪ್ (ತುರಿದದ್ದು)
ಈರುಳ್ಳಿ – 1
ಹಸಿ ಮೆಣಸಿನಕಾಯಿ – 2–3
ಬೆಳ್ಳುಳ್ಳಿ – 3 ಕಾಳು
ಹುಣಸೆಹಣ್ಣು – ಸಣ್ಣ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೀ ಸ್ಪೂನ್
ಒಗ್ಗರಣೆಗಾಗಿ:
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಮಾಡುವ ವಿಧಾನ:
ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿಯಿರಿ.
ನಂತರ ತುರಿದ ಮೂಲಂಗಿ ಹಾಕಿ 5–7 ನಿಮಿಷ ಮೃದುವಾಗುವವರೆಗೆ ಬೇಯಿಸಿ. ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
ಈಗ ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ ಇನ್ನೂ 2 ನಿಮಿಷ ಬೇಯಿಸಿ. ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಮೃದುವಾಗಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವು ಒಗ್ಗರಣೆ ಮಾಡಿ ಚಟ್ನಿಗೆ ಹಾಕಿ ಮಿಕ್ಸ್ ಮಾಡಿ.



