ರುಚಿಯಲ್ಲಿ ತುಂಬಾ ರಿಚ್ ಆಗಿರುವ ಒಂದು ಸೈಡ್ ಡಿಶ್ ಎಂದರೆ ಶೇಂಗಾ ಚಟ್ನಿ. ಇದನ್ನು ಇಡ್ಲಿ, ದೋಸೆ, ರೊಟ್ಟಿ ಅಥವಾ ಅನ್ನದ ಜೊತೆ ತಿನ್ನಬಹುದು. ಕಡಿಮೆ ಸಾಮಗ್ರಿಗಳಲ್ಲೇ ತಯಾರಾಗುವ ಈ ಚಟ್ನಿ, ಹಳ್ಳಿ ಮನೆಗಳಲ್ಲಿ ಫೇಮಸ್.
ಬೇಕಾಗುವ ಸಾಮಗ್ರಿಗಳು
ಶೇಂಗಾ (ಕಡಲೆಕಾಯಿ) – 1 ಕಪ್
ಒಣ ಮೆಣಸಿನಕಾಯಿ – 4 ರಿಂದ 5
ಬೆಳ್ಳುಳ್ಳಿ – 3 ರಿಂದ 4 ಕಾಳು
ಹುಣಸೆಹಣ್ಣು – ಸಣ್ಣ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಟೀ ಸ್ಪೂನ್
ಒಗ್ಗರಣೆಗಾಗಿ:
ಸಾಸಿವೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಎಣ್ಣೆ – 1 ಟೀ ಸ್ಪೂನ್
ಮಾಡುವ ವಿಧಾನ
ಮೊದಲು ಶೇಂಗಾವನ್ನು ಬಾಣಲೆಯಲ್ಲಿ ಎಣ್ಣೆ ಇಲ್ಲದೇ ಹುರಿದು, ತಣ್ಣಗಾಗಲು ಬಿಡಿ. ನಂತರ ಅದರ ಸಿಪ್ಪೆ ತೆಗೆದಿಡಿ.
ಅದೇ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಣ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಸ್ವಲ್ಪ ಹೊತ್ತು ಹುರಿಯಿರಿ.
ಈಗ ಮಿಕ್ಸಿ ಜಾರಿಗೆ ಹುರಿದ ಶೇಂಗಾ, ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆಹಣ್ಣು, ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ.
ರುಬ್ಬಿದ ಚಟ್ನಿಯನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ. ಕೊನೆಯಲ್ಲಿ ಸಣ್ಣ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ ಚಟ್ನಿಗೆ ಸೇರಿಸಿ.



