PAN Card | ಪ್ಯಾನ್ ಕಾರ್ಡ್‌ಗೆ expire date ಇದ್ಯಾ? ಒಂದಕ್ಕಿಂತ ಹೆಚ್ಚು ಕಾರ್ಡ್‌ ಇದ್ರೆ ಏನಾಗುತ್ತೆ?

ಹಣಕಾಸು ವಹಿವಾಟು, ತೆರಿಗೆ ಸಲ್ಲಿಕೆ, ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಹಲವು ಆರ್ಥಿಕ ಚಟುವಟಿಕೆಗಳಿಗೆ ಪ್ಯಾನ್ ಕಾರ್ಡ್ (Permanent Account Number) ಅನಿವಾರ್ಯ ದಾಖಲೆ. ಆದರೆ ಇದರ ಮಾನ್ಯತೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಗೊಂದಲ ಕಂಡುಬರುತ್ತಿದೆ. ಕೆಲವರು ಪ್ಯಾನ್ ಕಾರ್ಡ್ 10 ವರ್ಷಗಳ ಅವಧಿಗೆ ಮಾತ್ರ ಮಾನ್ಯವಿರುತ್ತದೆ ಎಂಬ ನಂಬಿಕೆಯಲ್ಲಿ ಇದ್ದರೆ, ಮತ್ತವರು ಇದರ ಮಾನ್ಯತೆ ಶಾಶ್ವತ ಎಂಬುದಾಗಿ ಹೇಳುತ್ತಿದ್ದಾರೆ. ಇವುಗಳಲ್ಲಿ ಯಾವುದು ನಿಜ? ಯಾವುದು ಸುಳ್ಳು ನೋಡೋಣ..

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಪ್ಯಾನ್ ಕಾರ್ಡ್‌ನ ಮಾನ್ಯತೆ ನಿಮ್ಮ ಜೀವಿತಾವಧಿಯಷ್ಟೇ ಇರುತ್ತದೆ. ಈ 10 ಅಂಕಿಯ ಆಲ್ಫಾನ್ಯೂಮರಿಕ್ ಪ್ಯಾನ್ ಸಂಖ್ಯೆಯು ಶಾಶ್ವತವಾಗಿದ್ದು, ವಿಳಾಸ, ಹೆಸರು ಅಥವಾ ಇತರ ವೈಯಕ್ತಿಕ ಮಾಹಿತಿಗಳನ್ನು ನೀವು ನವೀಕರಿಸಬಹುದಾದರೂ, ಪ್ಯಾನ್ ನಂಬರಿನಲ್ಲಿ ಯಾವುದೇ ಬದಲಾವಣೆ ಸಂಭವಿಸುವುದಿಲ್ಲ.

ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದುವುದು ಕಾನೂನು ವಿರೋಧಿ
ಐಟಿ ಕಾಯ್ದೆ ಸೆಕ್ಷನ್ 139A ಪ್ರಕಾರ, ಒಬ್ಬ ವ್ಯಕ್ತಿಗೆ ಕೇವಲ ಒಂದು ಪ್ಯಾನ್ ಕಾರ್ಡ್‌ ಮಾತ್ರ ಮಾನ್ಯ. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಅದಕ್ಕೆ 10,000 ವರೆಗೆ ದಂಡ ವಿಧಿಸಬಹುದಾಗಿದೆ. ಆದ್ದರಿಂದ, ಕಾರ್ಡ್ ಕಳೆದುಹೋಗಿದ್ದರೆ ಅಥವಾ ಹಳೆಯದು ಹಾನಿಯಾಗಿದ್ದರೆ ಪುನಃ ಅರ್ಜಿ ಹಾಕಿದರೂ, ಹಿಂದಿನ ಸಂಖ್ಯೆಯ ಕಾರ್ಡ್‌ನ ನಕಲಿ ಪ್ರತಿಯನ್ನೇ ನೀಡಲಾಗುತ್ತದೆ.

ಪ್ಯಾನ್ ಕಾರ್ಡ್‌ಗೆ ಹೇಗೆ ಅರ್ಜಿ ಹಾಕಬೇಕು?
ಪ್ಯಾನ್ ಕಾರ್ಡ್‌ಗೆ ಹೊಸದಾಗಿ ಅಥವಾ ಬದಲಿಗೆ ಅರ್ಜಿ ಹಾಕಲು ಎರಡು ವಿಧಾನಗಳಿವೆ — ಆನ್‌ಲೈನ್ ಮತ್ತು ಆಫ್‌ಲೈನ್. NSDL ಅಥವಾ UTIITSL ಪೋರ್ಟಲ್‌ಗಳಲ್ಲಿ ಫಾರ್ಮ್ 49A (ಭಾರತೀಯ ನಾಗರಿಕರಿಗೆ) ಅಥವಾ 49AA (ವಿದೇಶಿಗಳಿಗೆ) ತುಂಬಿ, ಅಗತ್ಯ ದಾಖಲೆಗಳನ್ನು ಜೋಡಿಸಿ ಶುಲ್ಕ ಪಾವತಿಸಬೇಕು. ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮುದ್ರಿತ ಫಾರ್ಮ್ ನ್ನು ಪ್ಯಾನ್ ಕೇಂದ್ರಕ್ಕೆ ನೀಡಬಹುದು.

ಇ-ಪ್ಯಾನ್ ಎಂದರೆ ಏನು?
ಪ್ಯಾನ್‌ನ ಡಿಜಿಟಲ್ ಆವೃತ್ತಿಯಾದ ಇ-ಪ್ಯಾನ್ ಆಯ್ಕೆ ಕೂಡ ಲಭ್ಯವಿದ್ದು, ಇದು ವೇಗವಾಗಿ ಸಿಗುತ್ತದೆ ಮತ್ತು ಭೌತಿಕ ಪಡಿತರ ಅಗತ್ಯವಿಲ್ಲ. ಪ್ಯಾನ್ ಕಾರ್ಡ್ ಲಭ್ಯವಿರುವವರೆಗೆ ಆರ್ಥಿಕ ವ್ಯವಹಾರಗಳಲ್ಲಿ ತೊಂದರೆ ಇಲ್ಲದಂತೆ ಇ-ಪ್ಯಾನ್ ಬಳಕೆ ಸುಲಭ ಮಾರ್ಗವಾಗಿದೆ.

ಪ್ಯಾನ್ ನವೀಕರಣ ಮತ್ತು ಜಾಗೃತಿ ಅಗತ್ಯ
ಪ್ಯಾನ್ ಕಾರ್ಡ್‌ನ ಮಾನ್ಯತೆ ಶಾಶ್ವತವಾದರೂ, ಅದರಲ್ಲಿರುವ ವೈಯಕ್ತಿಕ ಮಾಹಿತಿ ನಿಖರವಾಗಿರಬೇಕು. ವಿಳಾಸ ಬದಲಾಗಿದ್ದಾಗ ಅಥವಾ ಹೆಸರಿನಲ್ಲಿ ತಿದ್ದುಪಡಿ ಅಗತ್ಯವಿದ್ದರೆ, ಅದನ್ನು ಅಧಿಕೃತ ಪೋರ್ಟಲ್ ಮೂಲಕ ನವೀಕರಿಸಬೇಕು. ಕಾನೂನು ಬಾಧ್ಯತೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಯಾವುದೇ ಹಣಕಾಸು ವ್ಯವಹಾರದಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!