ಮುಂಬೈ ಇಂಡಿಯನ್ಸ್ ಸೇರಿಕೊಂಡ ಪಾಂಡ್ಯ: ಗುಜರಾತ್ ಟೈಟಾನ್ಸ್ ಗೆ ನೂತನ ಸಾರಥಿ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಪಿಎಲ್ ಟೂರ್ನಿ ಹರಾಜಿಗೂ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡ ತೊರೆದು ಮುಂಬೈ ಇಂಡಿಯನ್ಸ್ ಸೇರಿಕೊಂಡಿದ್ದಾರೆ .
ಇತ್ತ ಪಾಂಡ್ಯ ನಿರ್ಗಮನದಿಂದ ಗುಜರಾತ್ ಟೈಟಾನ್ಸ್ ತಂಡ ಹೊಸ ನಾಯಕನ ಘೋಷಣೆ ಮಾಡಿದೆ. ಯುವ ಕ್ರಿಕೆಟಿಗ ಶುಬ್‌ಮನ್ ಗಿಲ್ ಹೊಸ ನಾಯಕನಾಗಿ ನೇಮಕಗೊಂಡಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡದ ನಿರ್ದೇಶಕ ವಿಕ್ರಮ್ ಸೋಲಂಕಿ ಈ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಕಳೆದೆರಡು ವರ್ಷದಲ್ಲಿ ಶುಬಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ತಮ್ಮ ನಾಯಕತ್ವ ಗುಣದಿಂದ ದಿಟ್ಟ ಹೋರಾಟ ನೀಡಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ್ದಾರೆ. 2022 ಹಾಗೂ 2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಶುಬಮನ್‌ ಗಿಲ್ ಗುಜರಾತ್ ತಂಡದ ನಾಯಕ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ವಿಕ್ರಮ್ ಸೋಲಂಕಿ ಹೇಳಿದ್ದಾರೆ.

ಶುಭಮನ್ ಗಿಲ್ ಧನ್ಯವಾದ ಹೇಳಿದ್ದು, ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ತಂಡದ ನಾಯಕತ್ವ ಜವಾಬ್ದಾರಿ ನೀಡಿದ ಫ್ರಾಂಚೈಸಿಗೆ ಧನ್ಯವಾದ. ಕಳೆದ ಎರಡು ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಉತ್ತಮ ಹೋರಾಟ ನೀಡಿದೆ. ಇದೀಗ ತಂಡದ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿ ಯಶಸ್ಸಿಗೆ ಕೊಡುಗೆ ನೀಡಲು ತಯಾರಾಗಿದ್ದೇನೆ ಎಂದು ಹೇಳಿದ್ದಾರೆ.

ಖರೀದಿಯಲ್ಲಿ ಹೈಡ್ರಾಮ
ಐಪಿಎಲ್ ಹರಾಜಿಗೂ ಮೊದಲು ತಂಡದಲ್ಲಿನ ಆಟಗಾರರ ಉಳಿಸಿಕೊಳ್ಳಳು ಹಾಗೂ ರಿಲೀಸ್ ಮಾಡಲು ನವೆಂಬರ್ 26 ಕೊನೆಯ ದಿನವಾಗಿತ್ತು. ಹೀಗಾಗಿ ಎಲ್ಲಾ ತಂಡಗಳು ಪಟ್ಟಿ ಪ್ರಕಟಿಸಿತ್ತು. ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖ ಕ್ರಿಕೆಟಿಗರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಕೆಲ ಕ್ರಿಕೆಟಿಗರನ್ನು ಬಿಡುಗಡೆ ಮಾಡಿತ್ತು. ಗುಜರಾತ್ ಟೈಟಾನ್ಸ್ ತಂಡದ ಪಟ್ಟಿ ಪ್ರಕಟಿಸಿದ ಎರಡು ಗಂಟೆಯಲ್ಲಿ ಹೈಡ್ರಾಮ ನಡೆದಿದೆ. ಮುಂಬೈ ಇಂಡಿಯನ್ಸ್ ಟ್ರೇಡ್ ಮೂಲಕ ಗುಜರಾತ್ ಟೈಟಾನ್ಸ್ ತಂಡದ ನಾಯಕನ್ನೇ ಖರೀದಿಸಿತ್ತು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಾಕಿ ಉಳಿದ 15 ಕೋಟಿ ರೂಪಾಯಿಯಲ್ಲಿ ಹಾರ್ದಿಕ್ ಪಾಂಡ್ಯ ಖರೀದಿಸಿತ್ತು. ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!