ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಂದರಿಯೊಬ್ಬಳ ಜತೆ ಹಾರ್ದಿಕ್ ಪಾಂಡ್ಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಾಚಿ ಎಂಬಾಕೆ ಜತೆಗಿನ ಫೋಟೊ ನೋಡಿ ಅಭಿಮಾನಿಗಳು ಪಾಂಡ್ಯ ಗರ್ಲ್‌ಫ್ರೆಂಡ್ ಎಂದು ಹೇಳಿದ್ದರು. ಈ ಬಗ್ಗೆ ಪತ್ನಿ ನತಾಶಾ ಇಂಡೈರೆಕ್ಟ್ ಆಗಿ ಟಾಂಟ್ ನೀಡಿದ್ದಾರೆ.
ಜನರು ಎಷ್ಟು ವೇಗವಾಗಿ ನಿರ್ಣಯಿಸ್ತಾರೆ. ಎಷ್ಟು ಬೇಗ ಬದಲಾಗ್ತಾರೆ? ಯಾರಾದ್ರೂ ನಮಗೆ ಅನಿಸದಂತೆ ನಡೆದುಕೊಳ್ಳದಿದ್ರೆ, ನಾವು ಅವರಿಗೆ ಏನಾಗ್ತಿದೆ ಎಂದು ಯೋಚಿಸಲ್ಲ. ನಾವು ಅವರ ಬಗ್ಗೆ ನಿರ್ಧರಿಸಿ ಬಿಡ್ತೀವಿ. ಇದ್ರಿಂದ ಅವರಿಗೆ ಏನಾಗುತ್ತೆ ಅಂತಾ ಯಾರೂ ಯೋಚಿಸಲ್ಲ. ಇದರ ಹಿಂದೆ ಏನಾಗಿದೆ. ಸಂದರ್ಭ ಹೇಗಿತ್ತು ಎಂದು ಚಿಂತಿಸಲ್ಲ. ಇಡೀ ಘಟನೆ ಹಿಂದೆ ನಡೆದಿರೋದು, ಯಾರಿಗೂ ಗೊತ್ತಿರಲ್ಲ. ನಿರ್ಣಯಕ್ಕೆ ಬರೋದನ್ನ ನಿಲ್ಲಿಸಿ, ತಾಳ್ಮೆ ಬೆಳೆಸಿಕೊಳ್ಳಿ ಎಂದು ಹೇಳಿದ್ದಾರೆ.