ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಜೋಕೋವಿಕ್ ಡಿವೋರ್ಸ್ ವಿಷಯ ಹೊರಬಿದ್ದಿದೆ. ಆದರೆ ಹಲವು ದಿನಗಳಿಂದ ಇವರು ದೂರ ಇದ್ದಾರೆ. ಡಿವೋರ್ಸ್ ನಂತರ ಇದೀಗ ಬಾಲಿವುಡ್ ಬೆಡಗಿ ಜೊತೆ ಹಾರ್ದಿಕ್ ಡೇಟಿಂಗ್ ಅನ್ನೋ ಗುಸುಗುಸು ಶುರುವಾಗಿದೆ.
ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಜೊತೆ ಹಾರ್ದಿಕ್ ಪಾಂಡ್ಯ ಲವ್ವಿ ಡವ್ವಿ ಶುರುವಾಗಿದೆ ಎಂದು ಗುಮಾನಿ ಹಬ್ಬಿದೆ. ಹಾರ್ದಿಕ್ ಮತ್ತು ಅನನ್ಯಾ ಡೇಟಿಂಗ್ ಬಗ್ಗೆ ಅಧಿಕೃತಪಡಿಸಿಲ್ಲ.
ಆದರೆ ಈ ಸುದ್ದಿಗೆ ಪುಷ್ಠಿ ನೀಡಿರೋದು ಮಾತ್ರ ಅಂಬಾನಿ ಮನೆ ಮದುವೆ. ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಇಬ್ಬರೂ ಜೊತೆಯಾಗಿ ಕುಣಿದಿರುವ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಇಬ್ಬರ ಡ್ಯಾನ್ಸ್ ನೋಡಿ ಇವರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಶುರುವಾಗಿದೆ ಎಂದೇ ಹೇಳಲಾಗುತ್ತಿದೆ.
View this post on Instagram