Pani Puri | ಪಾನಿಪುರಿಗೆ ಬೇರೆ ರಾಜ್ಯದಲ್ಲಿ ಯಾವೆಲ್ಲ ಹೆಸರುಗಳಿವೆ ಗೊತ್ತಾ?

ಭಾರತದ ಪ್ರತಿಯೊಂದು ರಾಜ್ಯದಲ್ಲೂ ಪಾನಿಪುರಿ ಜನಪ್ರಿಯ ತಿನಿಸಾಗಿದೆ. ಸಂಜೆ ಹೊತ್ತಿಗೆ ರಸ್ತೆ ಬದಿಯಲ್ಲಿ ಪಾನಿಪುರಿ ಅಂಗಡಿಗಳ ಮುಂದೆ ಜನಸಂದಣಿ ತುಂಬಿರೋದು ಸಾಮಾನ್ಯ. ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಸಿಕ್ಕರೂ ರಸ್ತೆ ಬದಿಯ ಪಾನಿಪುರಿಯೇ ಜನರಿಗೆ ಹೆಚ್ಚು ಇಷ್ಟ. ಪ್ರತಿ ರಾಜ್ಯದಲ್ಲಿ ಪಾನಿಪುರಿಗೆ ಹೆಸರು ಬೇರೆ, ರುಚಿಯಲ್ಲೂ ಸ್ವಲ್ಪ ವ್ಯತ್ಯಾಸ ಇದ್ದೇ ಇರುತ್ತದೆ.

Exploring the Tangy, Spicy, and Refreshing Delight of Pani Puri. India's Favourite Street Food Experience. Selective focus. Exploring the Tangy, Spicy, and Refreshing Delight of Pani Puri. India's Favourite Street Food Experience. Selective focus. Pani Puri  stock pictures, royalty-free photos & images

ಗೋಲ್‌ಗಪ್ಪಾ
ದೆಹಲಿ, ಉತ್ತರ ಪ್ರದೇಶ, ಪಂಜಾಬ್‌ಗಳಲ್ಲಿ ಪಾನಿಪುರಿಗೆ “ಗೋಲ್‌ಗಪ್ಪಾ” ಎಂದು ಕರೆಯಲಾಗುತ್ತದೆ. ಸಣ್ಣ ವೃತ್ತಾಕಾರದ ಪುರಿಯನ್ನ ಇಡಿಯಾಗಿ ಬಾಯಿಗೆ ಹಾಕಿಕೊಂಡು ತಿನ್ನೋದರಿಂದ ಈ ಹೆಸರಿನ ಬಂದಿದೆ ಎನ್ನಲಾಗಿದೆ.

Goal Gappa Or Pani Puri Pani Puri is Indian chat item Pani Puri  stock pictures, royalty-free photos & images

ಪುಚ್ಕಾ
ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂಗಳಲ್ಲಿ ಪಾನಿಪುರಿ “ಪುಚ್ಕಾ” ಹೆಸರಿನಿಂದ ಪ್ರಸಿದ್ಧ. ಇಲ್ಲಿ ಪುರಿಯೊಳಗೆ ತುಂಬುವ ಆಲೂಗಡ್ಡೆ ಪಲ್ಯ ಸಖತ್‌ ಸ್ಪೈಸಿ ಆಗಿದ್ದು, ರುಚಿಯೂ ಖಾರವಾಗಿರುತ್ತದೆ.

Famous Indian street food Gol Gappa, Puchka and Pani Puri. Famous Indian street food Gol Gappa, Puchka and Pani Puri. Pani Puri  stock pictures, royalty-free photos & images

ಗುಪ್ಚುಪ್
ಒಡಿಶಾ, ಜಾರ್ಖಂಡ್ ಮತ್ತು ಛತ್ತೀಸ್‌ಗಢ್‌ನಲ್ಲಿ ಪಾನಿಪುರಿಯನ್ನ “ಗುಪ್ಚುಪ್” ಎಂದು ಕರೆಯುತ್ತಾರೆ. ಬಾಯಿಗೆ ಹಾಕಿಕೊಂಡು ತಿನ್ನುವಾಗ ಬರುವ “ಚುಪ್” ಶಬ್ದದಿಂದಲೇ ಈ ಹೆಸರು ಬಂದಿದೆ ಎನ್ನಲಾಗುತ್ತದೆ.

Indian girl eating Phuchka or Pani Puri on a bowl made of shal leaves in india. This popular street food is also called gupchup or golgappa. It is crunchy fried hollow balls made of wheat. Indian girl eating Phuchka or Pani Puri on a bowl made of shal leaves in india. This popular street food is also called gupchup or golgappa. It is crunchy fried hollow balls made of wheat. Pani Puri  stock pictures, royalty-free photos & images

ಪಾನಿಪುರಿ
ಮುಂಬೈ, ಪುಣೆ, ಗುಜರಾತ್ ಮತ್ತು ಕರ್ನಾಟಕದಲ್ಲಿ ಇದನ್ನು ಪಾನಿಪುರಿ ಎಂದೇ ಕರೆಯುತ್ತಾರೆ. ಎಲ್ಲೆಡೆ ಈ ಹೆಸರು ಜನಪ್ರಿಯವಾಗಿದ್ದು, ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಹೆಸರಾಗಿದೆ.

Close-up image of Indian street food, panipuri being served with flavoured water (mint / masala) and chickpeas in a single use bowl, snacks at family Holi celebration Stock photo showing an unrecognisable person serving chickpeas in flavoured water (mint / masala) with panipuri in a disposable dish as part of Holi celebration. Pani Puri  stock pictures, royalty-free photos & images

ಪಕೋಡಿ
ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿ ಪಾನಿಪುರಿಗೆ “ಪಕೋಡಿ” ಎಂಬ ಹೆಸರಿದೆ. ಇಲ್ಲಿ ಕೂಡ ಒಳಗೆ ತುಂಬುವ ಪಲ್ಯ ಸ್ವಲ್ಪ ಹೆಚ್ಚು ಸ್ಪೈಸಿ ಆಗಿರುತ್ತದೆ.

Pani Puri shots, Indian street snack made of fried puries, mint chutney, sprouts and boiled potatoes. Indian Chat. Golgappe, puchka, batase. copy space Pani Puri shots, Indian street snack made of fried puries, mint chutney, sprouts and boiled potatoes. Indian Chat. Golgappe, puchka, batase. copy space Pani Puri  stock pictures, royalty-free photos & images

ಪಾನಿಪುರಿ ಯಾವ ಹೆಸರಿನಿಂದ ಕರೆದರೂ, ಅದು ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಗೋಲ್ಗಪ್ಪಾ, ಪುಚ್ಕಾ, ಗುಪ್ಚುಪ್ ಅಥವಾ ಪಕೋಡಿ ಯಾವ ರೂಪದಲ್ಲೇ ಇರಲಿ, ಪಾನಿಪುರಿಯ ರುಚಿ ಜನರನ್ನು ಒಂದೇ ಬಟ್ಟಲಲ್ಲಿ ಸೇರಿಸುವ ಸಾಮರ್ಥ್ಯ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!