ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದಾದ್ಯಂತ ಕಾಂತಾರ ಯಶಸ್ಸು ಹಬ್ಬಿದ್ದು, ಪಂಜುರ್ಲಿ ದೈವದ ಬಗ್ಗೆ ತಿಳಿಯದವರೇ ಇಲ್ಲ ಎನ್ನುವಂತಾಗಿದೆ. ನಿನ್ನೆ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಣೆಗೆ ವ್ಯಕ್ತಿಯೊಬ್ಬರುಉ ಪಂಜುರ್ಲಿ ದೈವದ ವೇಷ ತೊಟ್ಟು ಬಂದಿದ್ದರು.
ಇವರ ಫೋಟೊವನ್ನು ಖುದ್ದು ಆರ್‌ಸಿಬಿ ಅಫೀಶಿಯಲ್ ಟ್ವಿಟರ್‌ನಲ್ಲಿಯೇ ಪೋಸ್ಟ್ ಮಾಡಲಾಗಿದ್ದು, ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪಂಜುರ್ಲಿ ದೈವದ ವೇಷ ಧರಿಸಿ ರೀಲ್ಸ್ ಮಾಡುವವರಿಗೆ ಖಡಕ್ ವಾರ್ನಿಂಗ್ ನೀಡಾಗಿತ್ತು. ಇದೀಗ ಆರ್‌ಸಿಬಿ ಪಂದ್ಯದ ವೇಳೆ ಫ್ಯಾನ್ ಒಬ್ಬ ಈ ರೀತಿ ಬಂದಿರುವುದು ಕೆಲವರಿಗೆ ಸರಿ ಎನಿಸಿಲ್ಲ. ಕೆಲವರು ಕಾಂತಾರ ಕಂಪು ಎಲ್ಲೆಡೆ ಹರಡಿದೆ ಎಂದು ಸುಮ್ಮನಾದರೆ, ಇನ್ನು ಹಲವರು ದೈವದ ವಿಚಾರವಾಗಿ ತಮಾಷೆ ಸಲ್ಲ ಎಂದಿದ್ದಾರೆ.
Good Morning, 12th Man Army! Did you wake up with a big smile? 😬
WHAT A TURN OUT and WHAT A MATCH last night! Thank you! ❤️#PlayBold #ನಮ್ಮRCB #IPL2023 #RCBvMI pic.twitter.com/dnXMdNmUMJ
— Royal Challengers Bangalore (@RCBTweets) April 3, 2023