ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. ಭಾರತ ಒಂದೇ ಸ್ಪರ್ಧೆಯಲ್ಲಿ 2 ಪದಕಗಳನ್ನು ಗೆದ್ದು ಬೀಗಿದೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಹೆಚ್1 ವಿಭಾಗದ ಫೈನಲ್ನಲ್ಲಿ ಶೂಟರ್ ಅವನಿ ಲೆಖರಾ ಚಿನ್ನದ ಪದಕ ಗೆದ್ದು ಬೀಗಿದರೆ, ಮೋನಾ ಅಹರ್ವಾಲ್ ಕಂಚಿನ ಪದಕಕ್ಕೆ ಗುರಿಯಿಟ್ಟರು.
ಈ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಅವನಿ ಇದೀಗ ಮತ್ತೊಂದು ಚಿನ್ನದ ಪದಕದೊಂದಿಗೆ ದಾಖಲೆ ಬರೆದಿದ್ದಾರೆ.