ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ: ವೇದ ವಿಜ್ಞಾನ ಗುರುಕುಲದಲ್ಲಿ ಪಾರಾಯಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀರಾಮರ ಪ್ರಾಣಪ್ರತಿಷ್ಠೆಯ ಅಂಗವಾಗಿ ಜನಸೇವಾ ಪರಿಸರದ ವೇದ ವಿಜ್ಞಾನ ಗುರುಕುಲದಲ್ಲಿ ಆಚಾರ್ಯರು ಹಾಗೂ ವಿದ್ಯಾರ್ಥಿಗಳು ಸೇರಿ 24,000 ಶ್ಲೋಕಗಳನ್ನೊಳಗೊಂಡ “ವಾಲ್ಮೀಕಿ ರಾಮಾಯಣ”ದ ಪಾರಾಯಣವನ್ನು ಮಾಡುತ್ತಿದ್ದಾರೆ.

ನವೆಂಬರ್ 22 ರಂದು ಪ್ರಾರಂಭವಾದ ಈ ಪಾರಾಯಣ ಸತ್ರದ ಸಮಾರೋಪವು ಜನವರಿ 22 ರಂದು ಬೆಳಗ್ಗೆ 9:30 ಕ್ಕೆ ಜರುಗಲಿದೆ. ಅದರ ಅಂಗವಾಗಿ ಜನಸೇವಾ ವಿದ್ಯಾಕೇಂದ್ರದ ಕೇಶವಸ್ಮೃತಿ ಸಭಾಂಗಣದಲ್ಲಿ ಬಾಲರಾಮ ಹಾಗೂ ರಾಮಮಂದಿರವನ್ನು ರಂಗೋಲಿಯಲ್ಲಿ ಅರಳಿಸಲಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ರಂಗೋಲಿ ಕಲಾವಿದರು ವಿದ್ವಾನ್ ಅಕ್ಷಯ ಜಾಲಿಹಾಳ ಅವರು ಬಿಡಿಸಿದ 8*8 ಅಡಿಯ ರಂಗೋಲಿಯು ಎಲ್ಲರ ಕಣ್ಮನ ಸೆಳೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!