Saturday, November 1, 2025

Parenting | ಮಗುವಿನ ಜೊತೆ ಪ್ರಯಾಣ ಮಾಡುವ ತಾಯಂದಿರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್

ಮಗುವಿನ ಜನನದ ಬಳಿಕ ತಾಯಂದಿರ ಜೀವನದಲ್ಲಿ ಹಲವಾರು ಬದಲಾವಣೆಗಳು ಸಂಭವಿಸುತ್ತವೆ. ಅದರಲ್ಲೂ ಶಿಶುಗಳೊಂದಿಗೆ ಪ್ರಯಾಣಿಸುವುದು ಬಹುಮಟ್ಟಿಗೆ ಸವಾಲಿನ ಕೆಲಸವಾಗುತ್ತದೆ. ಅನಿವಾರ್ಯತೆ ಇಲ್ಲದಿದ್ದರೆ ಅವರು ಪ್ರಯಾಣವನ್ನು ತಪ್ಪಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಕೆಲವು ಸರಳ ಕ್ರಮಗಳನ್ನು ಅನುಸರಿಸಿದರೆ ಶಿಶುಗಳ ಜೊತೆಗೆ ಪ್ರಯಾಣವೂ ಸುಲಭವಾಗಬಹುದು ಮತ್ತು ನೆನಪಿನಲ್ಲಿಟ್ಟುಕೊಳ್ಳಬಹುದಾದ ಸುಂದರ ಅನುಭವವಾಗಬಹುದು.

  • ಹೆಚ್ಚುವರಿ ಬಟ್ಟೆ ಮತ್ತು ಅಗತ್ಯ ವಸ್ತುಗಳು: ಶಿಶುಗಳೊಂದಿಗೆ ಪ್ರಯಾಣಿಸುವಾಗ ಚೀಲದಲ್ಲಿ ಒಂದು ಅಥವಾ ಎರಡು ಹೆಚ್ಚುವರಿ ಜೋಡಿ ಬಟ್ಟೆಗಳನ್ನು ಇಟ್ಟುಕೊಳ್ಳುವುದು ಅತ್ಯಂತ ಅಗತ್ಯ. ಎಲ್ಲ ಬಟ್ಟೆಗಳನ್ನು ಲಗೇಜ್ ಬ್ಯಾಗ್‌ನಲ್ಲಿ ಇಡುವ ಬದಲು ಒಂದು ಸೆಟ್‌ನ್ನು ಕೈಚೀಲದಲ್ಲಿ ಇರಿಸಿಕೊಳ್ಳಿ. ಜೊತೆಗೆ ಮಗುವಿನ ಆರೈಕೆ ಉತ್ಪನ್ನಗಳು, ಒರೆಸುವ ಬಟ್ಟೆಗಳು ಮತ್ತು ಡೈಪರ್‌ಗಳನ್ನು ತೆಗೆದುಕೊಂಡು ಹೋಗಬೇಕು. ದೀರ್ಘ ಪ್ರಯಾಣಕ್ಕೆ ಬಟ್ಟೆಯ ಡೈಪರ್‌ಗಳು ಸೂಕ್ತವಾಗುತ್ತವೆ. ಅವು ಹೆಚ್ಚು ತೇವಾಂಶ ಹೀರಿಕೊಂಡು ಮಗುವಿಗೆ ಆರಾಮ ನೀಡುತ್ತವೆ.
  • ಲಾಂಗ್ ಡ್ರೈವ್ ಸಮಯದ ತಯಾರಿ: ಪ್ರಯಾಣದ ವೇಳೆ ಮಕ್ಕಳಿಗೆ ಅಗತ್ಯವಾದ ಎರಡು ಅಥವಾ ಮೂರು ಆಟಿಕೆಗಳನ್ನು ಮಾತ್ರ ತೆಗೆದುಕೊಳ್ಳಿ, ಅನಾವಶ್ಯಕವಾಗಿ ಬ್ಯಾಗ್ ಭಾರವಾಗಬಾರದು. ಲಾಂಗ್ ಡ್ರೈವ್‌ಗಳಲ್ಲಿ ಮಧ್ಯಂತರವಾಗಿ ವಾಹನ ನಿಲ್ಲಿಸಿ, ಮಗುವಿಗೆ ಹಾಲುಣಿಸಿ ಮತ್ತು ಡೈಪರ್ ಬದಲಾಯಿಸಿ. ಹಸಿರು ಪ್ರದೇಶಗಳಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ಮಗುವಿಗೂ ತಾಯಿಗೂ ತಾಜಾತನ ಸಿಗುತ್ತದೆ.
  • ಹವಾಮಾನ ಬದಲಾವಣೆ ಮತ್ತು ಆರೋಗ್ಯ: ಹವಾಮಾನ ಬದಲಾವಣೆಯಿಂದ ಮಕ್ಕಳು ಶೀತ, ಕೆಮ್ಮು ಅಥವಾ ನಿರ್ಜಲೀಕರಣದ ಸಮಸ್ಯೆಗೆ ಒಳಗಾಗಬಹುದು. ಆದ್ದರಿಂದ ಶಿಶುಗಳಿಗೆ ಅಗತ್ಯ ಔಷಧಿಗಳು ಮತ್ತು ಟಾನಿಕ್‌ಗಳನ್ನು ಜೊತೆಗೆ ಇಟ್ಟುಕೊಳ್ಳಿ. ಬೇಬಿ ಸ್ಟ್ರಾಲರ್ ಅಥವಾ ಕ್ಯಾರಿಯರ್ ಅನಗತ್ಯವೆಂದು ಕೆಲವರು ಭಾವಿಸಿದರೂ, ಪ್ರಯಾಣದ ಸಮಯದಲ್ಲಿ ಬಸ್ ಗೆ ಕಾಯಬೇಕಾದ ಸಂದರ್ಭಗಳಲ್ಲಿ ಅವು ಬಹಳ ಉಪಯುಕ್ತವಾಗುತ್ತವೆ.
  • ಆತುರ ಮಾಡಬೇಡಿ: ಮಕ್ಕಳೊಂದಿಗೆ ಪ್ರಯಾಣಿಸುವಾಗ ಸಮಯಕ್ಕಿಂತ ಮುಂಚೆ ವಿಮಾನ ನಿಲ್ದಾಣ ಅಥವಾ ರೈಲು ನಿಲ್ದಾಣ ತಲುಪುವುದು ಸೂಕ್ತ. ಹತ್ತುವಾಗ ಅಥವಾ ಇಳಿಯುವಾಗ ಆತುರದಿಂದ ನಡೆದುಕೊಳ್ಳಬೇಡಿ. ಕಿಟಕಿಯ ಹತ್ತಿರದ ಆಸನ ಆಯ್ಕೆ ಮಾಡಿಕೊಂಡರೆ ಹೆಚ್ಚು ಸ್ಥಳಾವಕಾಶ ಸಿಗುತ್ತದೆ, ಬೇಬಿ ಸೀಟ್ ಅಥವಾ ಸ್ಟ್ರಾಲರ್ ಇಡಲು ಅನುಕೂಲವಾಗುತ್ತದೆ.
  • ಸರಿಯಾದ ಸ್ಥಳದ ಆಯ್ಕೆ: ರಜೆಗೆ ಮಕ್ಕಳೊಂದಿಗೆ ಹೊರಟರೆ ಅತ್ಯಧಿಕ ಬಿಸಿ ಅಥವಾ ತಂಪು ಪ್ರದೇಶಗಳಿಗಿಂತ ಸಾಮಾನ್ಯ ತಾಪಮಾನವಿರುವ ಸ್ಥಳಗಳನ್ನು ಆಯ್ಕೆ ಮಾಡುವುದು ಉತ್ತಮ. ಕೆಲವು ಮಕ್ಕಳು ಕಡಲತೀರದ ವಾತಾವರಣವನ್ನು ಇಷ್ಟಪಡದಿರಬಹುದು, ಆದ್ದರಿಂದ ಅವರ ಆರಾಮವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಮಾಡಬೇಕು.
error: Content is protected !!