ಮಳೆಗಾಲವು ಮಕ್ಕಳಿಗೆ ಆಟವಾಡಲು ಸಂತೋಷ ನೀಡುವ ಕಾಲವಾಗಿರಬಹುದು. ಆದರೆ ಈ ಋತುವಿನಲ್ಲಿ ಆರೋಗ್ಯ ಸಮಸ್ಯೆಗಳು, ವೈರಲ್ ಫೀವರ್, ಡೆಂಗ್ಯೂ, ಮಲೇರಿಯಾ, ಸಾಂಕ್ರಾಮಿಕ ಜ್ವರ, ಅಲರ್ಜಿಗಳು ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಕ್ಕಳ ತ್ವಚೆ, ರೋಗ ನಿರೋಧಕ ಶಕ್ತಿ ಇನ್ನಷ್ಟು ಸೂಕ್ಷ್ಮವಾಗಿರುವುದರಿಂದ, ತಾಯಂದಿರು ಮತ್ತು ಪೋಷಕರು ಮುಂಚಿತವಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅನಿವಾರ್ಯ.
ರೇನ್‌ಕೋಟ್
ಮಕ್ಕಳಿಗೆ ಮಳೆ ಬೀಳುವುದರಲ್ಲಿ ಕುತೂಹಲ ಇರಬಹುದು. ಆದರೆ ವಾತಾವರಣದಲ್ಲಿ ತೇವಾಂಶ ಹೆಚ್ಚಿದಾಗ ಹವೆಯಿಂದ ಹರಡುವ ಸೋಂಕುಗಳು ಹೆಚ್ಚು. ಹೀಗಾಗಿ ಮಕ್ಕಳನ್ನು ಮಳೆ ನೇರವಾಗಿ ಬೀಳದಂತೆ ಕಾಯಲು ರೇನ್‌ಕೋಟ್ಉತ್ತಮ ಆಯ್ಕೆ. ಹಾಗೂ ಗಲಿ ಹೆಚ್ಚಾದಾಗ ಕೊಡೆ ಹಾರಿ ಹೋಗುವುದು, ಮಕ್ಕಳಿಗೆ ಹಿಡಿಯಲು ಸಾಧ್ಯವಾಗದೇ ಇರುವುದು,ಇದೆಲ್ಲ ಸಮಸ್ಯೆ ಇರುವುದಿಲ್ಲ.
ಜಾರುವ ಸ್ಲಿಪರ್‌ಗಳಿಗೆ ಬದಲಾಗಿ ಉತ್ತಮ ಗ್ರಿಪ್ ಇರುವ ಶೂಗಳು
ಮಳೆಗಾಲದಲ್ಲಿ ರಸ್ತೆ ಮೇಲ್ಮೈ ತೇವಾಂಶದಿಂದ ಜಾರುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳಿಗೆ ಒಳ್ಳೆಯ ಗ್ರಿಪ್ ಇರುವ ಶೂಗಳು ಅಥವಾ ಸ್ಪೆಷಲ್ ರೇನ್ ಶೂ ಹಾಕಿಸುವುದು ಪಾದರಕ್ಷೆಯ ಸುರಕ್ಷತೆ ಮತ್ತು ಪಾದ ಸಂಬಂಧಿ ರೋಗಗಳನ್ನು ತಡೆಯಲು ಸಹಾಯಕ.
ಮಳೆ ನೀರಿನಲ್ಲಿ ಆಟವಾಡಲು ಬಿಡಬೇಡಿ
ನದಿ, ಬಾವಿ ಅಥವಾ ರಸ್ತೆಯ ನೀರಿನಲ್ಲಿ ಆಟವಾಡುವುದು ಅಪಾಯಕಾರಿ. ಈ ನೀರಿನಲ್ಲಿ ತ್ಯಾಜ್ಯಗಳು, ಬ್ಯಾಕ್ಟೀರಿಯಾ, ಇರುತ್ತವೆ. ಇವುಗಳಿಂದ ಚರ್ಮದ ಸೋಂಕು, ಕಾಲಿನ ಗಾಯ, ಮತ್ತು ಮುಂತಾದ ರೋಗಗಳು ಹರಡಬಹುದು. ಕೆಲವೊಮ್ಮೆ ತುಂಡಾಗಿ ಬಿದ್ದ ವಿದ್ಯುತ್ ಕೇಬಲ್‌ಗಳು ಇರುವ ಅಪಾಯವೂ ಇದೆ.
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ
ಮಳೆಗಾಲದಲ್ಲಿ ವೈರಲ್ ಮತ್ತು ಬ್ಯಾಕ್ಟೀರಿಯಲ್ ಸೋಂಕುಗಳು ಹೆಚ್ಚಾಗುವುದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಉತ್ತಮವಾಗಿರಬೇಕು. ಹೀಗಾಗಿ ವಿಟಮಿನ್ C (ಕಿತ್ತಳೆ, ನಿಂಬೆಹಣ್ಣು), ಪ್ರೋಟೀನ್ (ಬೇಳೆ, ಮೊಸರು), ತುಳಸಿ ಕಷಾಯ, ಹಾಲಿನಲ್ಲಿ ಹಳದಿ ಸೇರಿಸಿ ಕುಡಿಯಲು ನೀಡುವುದು ಉತ್ತಮ.
ಮಳೆಯಲ್ಲಿ ನೆನೆದರೆ ಬಿಸಿ ನೀರಿನಿಂದ ಸ್ನಾನ ಮಾಡಿಸಿ
ಮಳೆ ಅಥವಾ ತೇವ ಹವಾಮಾನಕ್ಕೆ ಒಡ್ಡಲ್ಪಟ್ಟ ತಕ್ಷಣವೇ ಮಕ್ಕಳಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿದರೆ, ಚರ್ಮದ ಮೇಲಿನ ಬ್ಯಾಕ್ಟೀರಿಯಾ ಮತ್ತು ಧೂಳನ್ನು ನಿವಾರಿಸಬಹುದು. ಇದು ನೆಗಡಿ, ಜ್ವರ ಮುಂತಾದ ವ್ಯಾಧಿಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯಾಗುತ್ತದೆ.
ಮಳೆಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಅಪಾಯವಾಗದಂತೆ ಪೋಷಕರ ಜವಾಬ್ದಾರಿ ತುಂಬಾ ಹೆಚ್ಚಾಗುತ್ತದೆ. ಸರಿಯಾದ ಮುನ್ನೆಚ್ಚರಿಕೆಗಳು ಮಕ್ಕಳನ್ನು ಆರೋಗ್ಯಕರವಾಗಿ ಮತ್ತು ಖುಷಿಯಾಗಿ ಈ ಋತುವನ್ನು ಎಂಜಾಯ್ ಮಾಡಲು ಸಹಾಯ ಮಾಡುತ್ತದೆ.