March 11, 2026
Wednesday, March 11, 2026
spot_img

Parenting Tips | ಎಷ್ಟು ತಿಂಗಳಿನಿಂದ ಮಕ್ಕಳಿಗೆ ನೀರು ಕುಡಿಸೋಕೆ ಶುರು ಮಾಡ್ಬೇಕು?

ಮಗು ದೊಡ್ಡದಾಗ್ತಿದ್ದಂತೆ ಅನೇಕ ತಾಯಂದಿರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಇದು “ನೀರನ್ನು ಯಾವಾಗಿನಿಂದ ಕೊಡಬೇಕು?” ಹಿರಿಯರ ಸಲಹೆ, ಡಾಕ್ಟರ್ ಮಾತು, ಮನೆಯ ಪದ್ಧತಿ ಇವುಗಳ ನಡುವೆ ಗೊಂದಲ ಉಂಟಾಗುವುದು ಸಹಜ. ಆದರೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರಿಯಾದ ಸಮಯ ತಿಳಿದುಕೊಳ್ಳುವುದು ಬಹಳ ಮುಖ್ಯ.

ಆರು ತಿಂಗಳ ವಯಸ್ಸಿನ ತನಕ ಮಗು ತಾಯಿಯ ಹಾಲು ಅಥವಾ ಫಾರ್ಮುಲಾ ಹಾಲಿನಿಂದಲೇ ಅಗತ್ಯವಾದ ದ್ರವವನ್ನು ಪಡೆಯುತ್ತದೆ. ಈ ಹಂತದಲ್ಲಿ ಹೆಚ್ಚುವರಿ ನೀರು ನೀಡುವ ಅಗತ್ಯವಿಲ್ಲ. ತಾಯಿಯ ಹಾಲಿನಲ್ಲಿ ಶರೀರಕ್ಕೆ ಬೇಕಾದ ನೀರಿನ ಪ್ರಮಾಣ ಸಾಕಷ್ಟಿರುತ್ತದೆ. ಅದಕ್ಕೂ ಮುನ್ನ ನೀರು ಕೊಟ್ಟರೆ ಹೊಟ್ಟೆ ತುಂಬಿ ಹಾಲಿನ ಸೇವನೆ ಕಡಿಮೆಯಾಗಬಹುದು.

ಇದನ್ನೂ ಓದಿ:

ಆರು ತಿಂಗಳ ನಂತರ ಪೂರಕ ಆಹಾರ ಆರಂಭವಾದಾಗ ಸ್ವಲ್ಪ ಪ್ರಮಾಣದಲ್ಲಿ ಕುಡಿಸಿ. ಕುದಿಸಿ ತಣ್ಣಗಾದ ನೀರನ್ನು ಕೊಡಬಹುದು. ಆರಂಭದಲ್ಲಿ ಕೆಲ ಚಮಚಗಳಷ್ಟು ಸಾಕು. ಬಲವಂತಪಡಿಸದೇ, ನಿಧಾನವಾಗಿ ಅಭ್ಯಾಸ ಮಾಡಿಸುವುದು ಉತ್ತಮ.

ಒಂದು ವರ್ಷವಾದ ನಂತರ ಮಗು ಸ್ವತಂತ್ರವಾಗಿ ನೀರು ಕುಡಿಯಲು ಆರಂಭಿಸುತ್ತದೆ. ಈ ಅವಧಿಯಲ್ಲಿ ಶುದ್ಧ ಮತ್ತು ಕುದಿಸಿದ ನೀರನ್ನೇ ನೀಡಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ನೀಡುವುದು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯಕ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !