Parenting Tips | ಹದಿಹರೆಯದ ಮಗಳ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳೋದು ಹೇಗೆ?

ಹದಿಹರೆಯ (puberty) ಒಂದು ಸುಂದರವಾದ ನಾಜೂಕಾದ ಹಂತ. ಈ ಹಂತದಲ್ಲಿ ಹೆಣ್ಣುಮಕ್ಕಳ ದೇಹ ಹಾಗೂ ಮನಸ್ಸು ತುಂಬಾನೇ ಬದಲಾಗುತ್ತದೆ. ಇದು ಅವರಿಗೆ ಹೊಸ ಅನುಭವ, ಹೊಸ ಚಿಂತೆ ಹಾಗೂ ಅನೇಕ ಕುತೂಹಲಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಕೆಲವೊಮ್ಮೆ ಅವರು ಒಂಟಿತನ, ಕೋಪ, ಮುಜುಗರ ಮತ್ತು ಗೊಂದಲ ಅನುಭವಿಸಬಹುದು. ಈ ಸಮಯದಲ್ಲಿ ಪಾಲಕರ ಪಾತ್ರ ಅತ್ಯಂತ ಪ್ರಭಾವಶಾಲಿ ಮತ್ತು ಸೂಕ್ಷ್ಮವಾಗಿರುತ್ತದೆ. ಹೆಣ್ಣುಮಕ್ಕಳಿಗೆ ನಂಬಿಕೆಯ ಸ್ನೇಹಿತರಂತೆ ಅವರೊಂದಿಗೆ ಬಾಂಧವ್ಯ ಬೆಳೆಸುವುದು ಪ್ರಮುಖ.

ಮುಕ್ತ ಸಂಭಾಷಣೆಗೆ ಅವಕಾಶ ನೀಡಿ: ಮಗಳು ಏನು ಅನುಭವಿಸುತ್ತಿದ್ದಾಳೆ ಎಂಬುದನ್ನು ತಿಳಿಯಲು ತಾಳ್ಮೆಯೊಂದಿಗೆ ಕೇಳಿ. ತಕ್ಷಣ ಜಡ್ಜ್ ಮಾಡದೆ, ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ.

Indian Mother and Teen young daughter sitting on sofa at home looking towards the camera ,Happy Young teen hug Mother in living room having candid moments Indian Mother and Teen young daughter sitting on sofa at home looking towards the camera ,Happy Young teen hug Mother in living room having candid moments relationship with your teenage daughter stock pictures, royalty-free photos & images

ಗಟ್ಟಿಯಾದ ಸ್ನೇಹದ ಬಂಧ ಕಟ್ಟಿಕೊಳ್ಳಿ: ಅವಳ ಹವ್ಯಾಸಗಳಲ್ಲಿ ಭಾಗವಹಿಸಿ, ಸಮಯ ಕಳೆಯಿರಿ. ಮೊಬೈಲ್‌ ಅಥವಾ ಇತರ ತಂತ್ರಜ್ಞಾನಗಳಿಗೆ ಅವಳು ಅತಿಯಾದ ಅವಲಂಬನೆ ಹೊಂದದಂತೆ ನೋಡಿಕೊಳ್ಳಿ.

ಸ್ವಾತಂತ್ರ್ಯಕ್ಕೆ ಗೌರವ ನೀಡಿ: ಅವಳ ನಿರ್ಧಾರಗಳಿಗೆ ಪ್ರೋತ್ಸಾಹ ನೀಡಿ. ತಪ್ಪಿದರೆ ಕೋಪಗೊಳ್ಳದೇ ಶಾಂತಿಯುತವಾಗಿ ಮಾರ್ಗದರ್ಶನ ನೀಡಿ.

Mother and daughter are happy and promise not to swear at each other happy mother and daughter doing promise relationship with your teenage daughter stock pictures, royalty-free photos & images

ಅವಳ ನಂಬಿಕೆಯನ್ನು ಗಳಿಸಿ: ಯಾವತ್ತೂ ಅವಳ ಖಾಸಗಿ ವಿಷಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಇದು ಅವಳಿಗೆ ಮುಜುಗರ ಮತ್ತು ಅಸುರಕ್ಷತೆ ಉಂಟುಮಾಡುತ್ತದೆ.

ಅವಳ ಆಸಕ್ತಿಗಳಿಗೆ ಬೆಂಬಲ ನೀಡಿ: ಸ್ಪರ್ಧೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿ. ನಿಮ್ಮ ಪ್ರೋತ್ಸಾಹವೇ ಅವಳಿಗೆ ಆತ್ಮವಿಶ್ವಾಸ.

Mother comforting her stressed daughter at park Mother comforting her daughter suffering with headache at park relationship with your teenage daughter stock pictures, royalty-free photos & images

ಹದಿಹರೆಯದಲ್ಲಿ ಮಕ್ಕಳೊಂದಿಗೆ ನಿಕಟ ಬಾಂಧವ್ಯ ಹೊಂದುವುದು, ಅವರ ಭವಿಷ್ಯದ ಗುಣಾತ್ಮಕ ವ್ಯಕ್ತಿತ್ವದ ತಳಹದಿಯನ್ನೇ ರೂಪಿಸಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!