ಇತ್ತೀಚಿನ ದಿನಗಳಲ್ಲಿ ಪೌಷ್ಟಿಕಾಂಶ, ಜೀವನಶೈಲಿ, ಮತ್ತು ಪರಿಸರದ ಬದಲಾವಣೆಯಿಂದಾಗಿ ಕೆಲವೊಂದು ಮಕ್ಕಳಿಗೆ ನಿರೀಕ್ಷಿತ ವಯಸ್ಸಿಗೆ ಮುಂಚೆಯೇ ಪೀರಿಡ್ಸ್ (periods) ಪ್ರಾರಂಭವಾಗುತ್ತಿದೆ. ಇದನ್ನು ವೈದ್ಯಕೀಯವಾಗಿ Precocious Puberty (ಅಕಾಲಿಕ ಋತುಸ್ರಾವ) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಸ್ತ್ರಾವ 11–14 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಗಬೇಕು. ಆದರೆ, 8 ವರ್ಷದೊಳಗೆ ಆರಂಭವಾದರೆ Precocious Puberty ಎನ್ನುತ್ತಾರೆ.
ಇದನ್ನು ತಡೆಗಟ್ಟಲು ಪೋಷಕರು ತೆಗೆದುಕೊಳ್ಳಬಹುದಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ:
ಆಹಾರದಲ್ಲಿ ಎಚ್ಚರಿಕೆ ವಹಿಸಿ
fast food, ಹೆಚ್ಚು ಹಾರ್ಮೋನ್ಗಳು ಇರುವ ಮಾಂಸ, ಆಹಾರಗಳನ್ನು ಮಕ್ಕಳಿಗೆ ತಿನ್ನಿಸದಿರಿ. ಬದಲಾಗಿ ನೈಸರ್ಗಿಕ ಪೌಷ್ಟಿಕ ಆಹಾರ, ಹಣ್ಣುಗಳು, ತರಕಾರಿಗಳನ್ನು ನೀಡಿರಿ. ಹಾರ್ಮೋನ್ಗಳಲ್ಲಿ ತೊಂದರೆ ಉಂಟುಮಾಡಬಲ್ಲ ಬಾಟಲ್ದ ನೀರು ಅಥವಾ ಪ್ಲಾಸ್ಟಿಕ್ ಕಂಟೈನರ್ಗಳಲ್ಲಿ ಸಂಗ್ರಹಿಸಲಾದ ಆಹಾರದಿಂದ ದೂರವಿರಿ.
ಸ್ಥೂಲತೆಯನ್ನು ನಿಯಂತ್ರಿಸಿ
ಅತಿ ಹೆಚ್ಚು ತೂಕವು ಮಕ್ಕಳಲ್ಲಿ ಹಾರ್ಮೋನಲ್ ಅಸಮತೋಲನ ಉಂಟುಮಾಡಿ ಮೊದಲು ಸ್ತ್ರಾವಕ್ಕೆ ಕಾರಣವಾಗಬಹುದು. ಮಕ್ಕಳನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿ, ನಿಯಮಿತ ವ್ಯಾಯಾಮ ಮಾಡಿಸುವ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿ.
ಟಿವಿ, ಮೊಬೈಲ್ ನಿರೀಕ್ಷಣೆಗೆ ಮಿತಿಮೀರದ ಸಮಯ
ಟಿವಿ, ಮೊಬೈಲ್ ಅಥವಾ ಲ್ಯಾಪ್ಟಾಪ್ ಬಳಕೆಯಿಂದ ಮಕ್ಕಳ ಮೇಲೆ ಮನೋಭಾವನಾತ್ಮಕ ಪರಿಣಾಮ ಬೀರುತ್ತದೆ. ಇದು ಕೂಡ ಹಾರ್ಮೋನ್ ವ್ಯತ್ಯಾಸಕ್ಕೆ ಕಾರಣವಾಗಬಹುದು.
ವೈದ್ಯಕೀಯ ತಪಾಸಣೆ ಮಾಡಿಸಿ
ಮಕ್ಕಳಿಗೆ ಅಕಾಲಿಕ ಸ್ತ್ರಾವದ ಲಕ್ಷಣಗಳು ಕಂಡುಬಂದರೆ, ತಕ್ಷಣ ಮಕ್ಕಳ ವೈದ್ಯರನ್ನು ಸಂಪರ್ಕಿಸಿ. ಅವರು ಹಾರ್ಮೋನ್ ಟೆಸ್ಟ್ ಅಥವಾ ಸ್ಕ್ಯಾನ್ ಮೂಲಕ ಕಾರಣ ತಿಳಿದು, ತಕ್ಕ ಚಿಕಿತ್ಸೆಯನ್ನು ನೀಡಬಹುದು.
ಮಾನಸಿಕ ಸಮತೋಲನಕ್ಕೆ ಬೆಂಬಲ ನೀಡಿ
ಮಕ್ಕಳಿಗೆ ಹೆಚ್ಚು ಒತ್ತಡ, ಭಯ ಅಥವಾ ಆತಂಕ ಇದ್ದಾರೆ ಹಾರ್ಮೋನಲ್ ವ್ಯತ್ಯಾಸ ಉಂಟಾಗಬಹುದು.
ಅದಕ್ಕಾಗಿ ಮನೆಯ ವಾತಾವರಣದಲ್ಲಿ ಶಾಂತಿ, ಪ್ರೀತಿ ತುಂಬಿರಲಿ. ಮಕ್ಕಳ ಜೊತೆಗೆ ಮಾತನಾಡಿ, ಅವರು ಭಯಪಡುವ ವಿಷಯಗಳ ಬಗ್ಗೆ ಕೇಳಿ ನೆರವಾಗಿ ಮಾತನಾಡಿ.
Precocious Puberty ತಡೆಯುವುದು ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೂ, ಜೀವನಶೈಲಿಯಲ್ಲಿನ ಸರಿಯಾದ ಬದಲಾವಣೆಗಳು ಇದರ ಅಪಾಯವನ್ನು ಕಡಿಮೆ ಮಾಡಬಹುದು. ವೈದ್ಯರ ಸಲಹೆಯೊಂದಿಗೆ ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಪೋಷಕರ ಜವಾಬ್ದಾರಿ ಪೂರೈಸುವುದು ಮುಖ್ಯ.