January17, 2026
Saturday, January 17, 2026
spot_img

Parenting Tips | ಮಕ್ಕಳ ಮುಂದೆ ಜಗಳ ಆಡೋ ಮುಂಚೆ ನೂರು ಸಲ ಯೋಚಿಸಿ!

ಮನೆಯೊಳಗಿನ ಸಣ್ಣಪುಟ್ಟ ಘರ್ಷಣೆಗಳು ಸಾಮಾನ್ಯ. ಆದರೆ ಗಂಡ–ಹೆಂಡತಿ ನಡುವಿನ ಜಗಳಗಳು ಮಿತಿ ಮೀರಿದರೆ ಅದು ಮನೆಯ ಶಾಂತಿಯನ್ನು ಕದಡುವುದರ ಜೊತೆಗೆ ಮಕ್ಕಳ ಮನೋಭಾವದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಮಕ್ಕಳು ತುಂಬಾ ಕೋಮಲ ಮನಸ್ಸಿನವರು, ಅವರು ಪೋಷಕರ ನಡವಳಿಕೆಯಿಂದಲೇ ಜೀವನ ಪಾಠಗಳನ್ನು ಕಲಿಯುತ್ತಾರೆ. ಆದ್ದರಿಂದ ಪೋಷಕರ ನಡುವೆ ನಡೆಯುವ ನಿರಂತರ ಜಗಳವು ಮಕ್ಕಳ ಭವಿಷ್ಯಕ್ಕೆ ಆಳವಾದ ಹಾನಿ ಮಾಡಬಹುದು.

ಆತಂಕ, ದುಃಖ ಮತ್ತು ಅಭದ್ರತೆ:
ಮಕ್ಕಳು ಪೋಷಕರ ಜಗಳ ನೋಡಿದಾಗ ಆತಂಕ, ದುಃಖ ಮತ್ತು ಭಯದಲ್ಲಿ ಬದುಕುವ ಸಾಧ್ಯತೆ ಹೆಚ್ಚುತ್ತದೆ. ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳು ಭಾವನಾತ್ಮಕವಾಗಿ ಅಸ್ಥಿರರಾಗಬಹುದು.

ಪೋಷಕರ ಮೇಲಿನ ಅಸಮಾಧಾನ:
ತಂದೆ–ತಾಯಿ ಪದೇ ಪದೇ ಜಗಳವಾಡುವುದನ್ನು ನೋಡಿದ ಮಕ್ಕಳು, ಅವರಿಬ್ಬರ ಮೇಲೂ ಕೋಪ ಮತ್ತು ಅಸಮಾಧಾನ ಬೆಳೆಸಿಕೊಳ್ಳಬಹುದು. ಇದರಿಂದ ಮಕ್ಕಳಲ್ಲಿ ಪ್ರೀತಿಗಿಂತ ಅಸಹನೆ ಹೆಚ್ಚು ಬೆಳೆಯುತ್ತದೆ.

ಮಾನಸಿಕ ಆರೋಗ್ಯದ ಮೇಲೆ ಪ್ರಭಾವ:
ನಿರಂತರ ಜಗಳ ತುಂಬಿದ ಮನೆ, ಮಾತು ಮಕ್ಕಳಲ್ಲಿ ಖಿನ್ನತೆ, ಆತಂಕದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಜೊತೆಗೆ ಅವರ ಆತ್ಮವಿಶ್ವಾಸ ದುರ್ಬಲಗೊಳ್ಳಬಹುದು.

ಆತ್ಮವಿಶ್ವಾಸ ಕುಗ್ಗುವುದು:
ಪೋಷಕರ ಜಗಳ ಮಕ್ಕಳಲ್ಲಿ ಅಭದ್ರತೆ ಹಾಗೂ ಅಪರಾಧ ಭಾವನೆಗಳಿಗೆ ಕಾರಣವಾಗಬಹುದು. ಇದು ಅವರ ಸ್ವಾಭಿಮಾನವನ್ನು ಹಾಳುಮಾಡಿ ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತದೆ.

ಕೆಟ್ಟ ನಡವಳಿಕೆಯ ಬೆಳವಣಿಗೆ:
ಮಕ್ಕಳು ನೋಡಿ ಕಲಿಯುವ ಪ್ರವೃತ್ತಿ ಹೊಂದಿರುವುದರಿಂದ, ಪೋಷಕರು ಜಗಳವಾಡಿದರೆ ಅವರು ಕೂಡ ಅದನ್ನೇ ತಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದಲ್ಲಿನ ಅವರ ಸಂಬಂಧಗಳ ಗುಣಮಟ್ಟ ಹಾಳಾಗಬಹುದು.

ಶಿಕ್ಷಣದ ಮೇಲೆ ಪರಿಣಾಮ:
ಪೋಷಕರ ನಡುವೆ ನಡೆಯುವ ಜಗಳಗಳಿಂದ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿ, ಅವರು ಅಧ್ಯಯನದಲ್ಲಿ ಗಮನ ಕೇಂದ್ರೀಕರಿಸಲು ವಿಫಲರಾಗುತ್ತಾರೆ. ಇದು ಅವರ ವಿದ್ಯಾಭ್ಯಾಸ ಮತ್ತು ಒಟ್ಟಾರೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

Must Read

error: Content is protected !!