ಮಕ್ಕಳು ನಮ್ಮ ಜೀವನದ ಅತಿ ಅಮೂಲ್ಯ ಭಾಗ. ಆ ಪುಟ್ಟ ಹೃದಯಗಳ ಪ್ರೀತಿ, ಮುಗ್ದತೆ ನಮ್ಮೆಲ್ಲ ನೋವುಗಳನ್ನ ಮರೆಯುವಂತೆ ಮಾಡುತ್ತೆ. ಮಕ್ಕಳು ನಾವು ಹೇಳಿದ್ದು ಕೇವಲ ಕೇಳುವುದಲ್ಲ, ನಮ್ಮನ್ನು ನೋಡಿ ಕಲಿತಾರೆ ಕೂಡ. ಅದಕ್ಕಾಗಿ, ಪ್ರೀತಿ, ಪ್ರೋತ್ಸಾಹ, ಹಾಗೂ ಸಹನೆಯಿಂದ ಅವರೊಡನೆ ವರ್ತಿಸುವುದು ಬಹಳ ಮುಖ್ಯ.
ಮಕ್ಕಳ ನಿರೀಕ್ಷೆಗಳು ಈ ಕೆಲವು ಅಂಶಗಳನ್ನು ಅಳವಡಿಸಿಕೊಂಡರೆ ಮಕ್ಕಳಿಗೆ ಸುಖ, ಆರೋಗ್ಯ, ಹಾಗೂ ಆತ್ಮವಿಶ್ವಾಸದಿಂದ ಬೆಳೆಯಬಹುದು.
ಹೇಳುವ ಬದಲು ಮಾಡಿ ತೋರಿಸಿ – ಮಕ್ಕಳು ನೋಡಿಕೊಂಡು ಕಲಿಯುತ್ತಾರೆ. ನಿಮ್ಮ ವರ್ತನೆ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಮಕ್ಕಳನ್ನು ಪ್ರೀತಿಸಿ – ನಿಮ್ಮ ಅಪ್ಪುಗೆ ಮತ್ತು ಮುತ್ತುಗಳನ್ನು ನೀಡಿ. ಇದರಿಂದ ಮಕ್ಕಳು ಇನ್ನಷ್ಟು ಪ್ರೀತಿಯನ್ನು ಅರಿತುಕೊಳ್ಳತ್ತಾರೆ.
ತಾಳ್ಮೆ ಮತ್ತು ದಯೆ – ಮಕ್ಕಳ ಮೆದುಳು ಬೆಳವಣಿಗೆಯಾಗುತ್ತಿರುವುದರಿಂದ ಕಲಿಯಲು ಸ್ವಲ್ಪ ನಿಧಾನ. ಆದರೆ ನೀವು ತುಂಬಾ ತಾಳ್ಮೆಯಿಂದ ಮತ್ತು ಸಹನೆಯಿಂದ ಕಲಿಸಿದರೆ ಮಕ್ಕಳು ಖುಷಿಯಿಂದ ಕಲಿಯುತ್ತಾರೆ.
ನಿನ್ನ ಜೊತೆ ನಾನಿದ್ದೇನೆ – ಏನಾದರೂ ಆಗಲಿ, ಯಾವ ಸಂದರ್ಭದಲ್ಲೂ ಸರಿ ನಿನ್ನ ಜೊತೆ ನಾನಿರುತ್ತೇನೆ ಎನ್ನುವ ನಂಬಿಕೆ ನಿಮ್ಮ ಮಕ್ಕಳಿಗೆ ಕೊಡಿ. ಮಕ್ಕಳು ನಿಮ್ಮನ್ನು ನಂಬಿ ಬಂದಾಗ, ಅವರಿಗೆ ಆಶ್ರಯ ನೀಡಿ.
ಮಕ್ಕಳೊಂದಿಗೆ ಮಾತನಾಡಿ – ಮಕ್ಕಳೊಂದಿಗೆ ಸಂಭಾಷಣೆ ಮಾಡಿ. ನಿಮಗೆ ಗೊತ್ತಿರುವ ವಿಚಾರವನ್ನ ಅವರ ಬಳಿ ಹಂಚಿಕೊಳ್ಳಿ.
ಮಕ್ಕಳ ಮಾತನ್ನು ಕೇಳಿ – ಯಾವುದೇ ತೀರ್ಮಾನ, ತೀರ್ಪು, ಉಪದೇಶವಿಲ್ಲದೆ ಮಕ್ಕಳ ಮಾತನ್ನು ಕೇಳಿಸಿಕೊಳ್ಳಿ.
ನಿಮ್ಮನ್ನ ನೀವು ಒಪ್ಪಿಕೊಳ್ಳಿ – ನಿಮ್ಮ ಮಕ್ಕಳನ್ನು ಬೇರೆಯವರ ಮಕ್ಕಳೊಂದಿಗೆ ಹೋಲಿಸಬೇಡಿ. ಮಕ್ಕಳಿಗೆ ಅವರದ್ದೇ ಆದ ವ್ಯಕ್ತಿತ್ವ ಇದೆ.
ಹೊರಗಡೆ ಆಟವಾಡಲು ಬಿಡಿ – ನೈಸರ್ಗಿಕ ವಾತಾವರಣದಲ್ಲಿ ಆಟವಾಡುವುದರಿಂದ ಮಕ್ಕಳು ಆರೋಗ್ಯಕರವಾಗಿರುತ್ತಾರೆ. ಮತ್ತು ಹೊಸ ಹೊಸ ಸಂಗತಿಗಳನ್ನು ಕಲಿಯುತ್ತಾರೆ.
ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿ – ಮಕ್ಕಳು ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿ. ನಾನು ತಪ್ಪು ಮಾಡಿದರೂ ಸಹ ಅದರಿಂದ ಕಲಿಯಲು ಅವಕಾಶ ಕೊಡಿ.
ಈ ಅಂಶಗಳು ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತವೆ.