‘ಆಪರೇಷನ್‌ ಸಿಂದೂರ’ ಸಂಭ್ರಮಿಸಿದ ಪೋಷಕರು: ಯುಪಿಯಲ್ಲಿ 17 ಶಿಶುಗಳಿಗೆ ‘ಸಿಂದೂರ’ ಎಂಬ ಹೆಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ ಸಿಂದೂರವನ್ನು ದೇಶಾದ್ಯಂತ ಸಂಭ್ರಮಿಸಲಾಗಿದೆ. ಪೋಷಕರು ಕೂಡ ಈ ಆಪರೇಷನ್‌ ಹಾಗೂ ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿ ಮಕ್ಕಳಿಗೆ ಸಿಂದೂರ ಎಂದು ಹೆಸರಿಟ್ಟಿದ್ದಾರೆ.

ಹೌದು, ಉತ್ತರ ಪ್ರದೇಶದಲ್ಲಿ ಒಟ್ಟಾರೆ 17 ಕಂದಮ್ಮಗಳಿಗೆ ಸಿಂದೂರ ಎಂದೇ ಹೆಸರಿಡಲಾಗಿದೆ. ಪೋಷಕರು ನಮ್ಮ ಮಕ್ಕಳು ಈ ಸಮಯದಲ್ಲಿ ಹುಟ್ಟಿದ್ದು ನಮ್ಮ ಖುಷಿ ಎಂದಿದ್ದಾರೆ. ಪಾಕ್‌ಗೆ ಪಾಠ ಕಲಿಸಿದ ಆಪರೇಷನ್‌ ಸಿಂದೂರ ಹೆಸರನ್ನು ಮಕ್ಕಳಿಗೆ ಇಟ್ಟಿದ್ದು ನಮ್ಮ ಹೆಮ್ಮೆ ಎಂದಿದ್ದಾರೆ.

ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಈ ರೀತಿ ಹೆಸರಿಡುವುದು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಇಲ್ಲಿ ನವಜಾತ ಶಿಶುಗಳಿಗೆ ತಂದೆಯ ಚಿಕ್ಕಮ್ಮ ಹೆಸರಿಡುತ್ತಾರೆ. ಆದರೆ ಹೆಣ್ಣುಮಕ್ಕಳ ಸಂಕೇತ ಈ `ಸಿಂದೂರ’ ಈಗ ಒಗ್ಗಟಿನ ಸಂಕೇತವಾಗಿದೆ. ನಮ್ಮ ಸೈನಿಕರು ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಎರಡು ದಿನಗಳ ನಂತರ, ಮೇ 9 ರಂದು ನನ್ನ ಮಗು ಜನಿಸಿತು. ಹೀಗಾಗಿ ಅವಳಿಗೆ ಸಿಂದೂರ ಎಂದು ಹೆಸರಿಟ್ಟಿದ್ದೇವೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!