ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ಎಲ್ಲೆಂದರಲ್ಲಿ ಮಕ್ಕಳು ಬೈಕ್ ಓಡಿಸೋದು ಆಗಾಗ ಕಾಣಿಸುತ್ತಲೇ ಇರುತ್ತದೆ, ಮಕ್ಕಳಿಗೆ ಬುದ್ದಿ ಹೇಳೋ ಜೊತೆಗೆ ಇವರ ಕೈಗೆ ಬೈಕ್ ಕೊಡುವ ಪೋಷಕರಿಗೆ ಪೊಲೀಸರು ಚುರುಕ್ ಮುಟ್ಟಿಸಿದ್ದಾರೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಡಿಎಲ್ ಇಲ್ಲದೇ ಹೇಗೆ ಬೇಕೋ ಹಾಗೆ ಬೈಕ್ ರೈಡಿಂಗ್ ಮಾಡುವ ಪ್ರಕರಣಗಳ ಹೆಚ್ಚಾಗುತ್ತಿವೆ. ಇದರಿಂದ ಬೈಕ್ ಓಡಿಸುವವರಿಗೂ, ಫುಟ್‌ಪಾತ್‌ನಲ್ಲಿ ನಿಂತವರಿಗೂ, ಜೊತೆಯಲ್ಲಿ ಗಾಡಿ ಓಡಿಸುವವರಿಗೂ ಅಪಾಯವಾಗುವ ಸಾಧ್ಯತೆ ಇದೆ.
ಒಂದೇ ದಿನ ಬೆಂಗಳೂರಿನಲ್ಲಿ ಪೊಲೀಸರು 1,800 ಮಕ್ಕಳ ಪೋಷಕರಿಗೆ ದಂಡ ವಿಧಿಸಿದ್ದಾರೆ. ಇದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ಕಾಲೇಜುಗಳಿಗೇ ತೆರಳಿ ವಿದ್ಯಾರ್ಥಿಗಳ ಡಿಎಲ್ ಕೇಳಿದ್ದಾರೆ. 150 ಶಾಲೆ, ಕಾಲೇಜುಗಳಲ್ಲಿ ತಪಾಸಣೆ ನಡೆದಿದ್ದು, 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಯಮ ಉಲ್ಲಂಘನೆ ಮಾಡಿರುವುದು ಕಾಣಿಸಿದೆ.