ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ನಿಮಿಷಕ್ಕಾದರೂ ಪರವಾಗಿಲ್ಲ ಮಕ್ಕಳನ್ನು ಯಾವುದೇ ಕಾರಣಕ್ಕೂ ಕಾರ್‌ನಲ್ಲಿಯೇ ಬಿಟ್ಟು ಹೋಗಬೇಡಿ.
ವಾಷಿಂಗ್ಟನ್‌ನಲ್ಲಿ ಆಕಸ್ಮಿಕವಾಗಿ ಪೋಷಕರು ತಮ್ಮ 18 ತಿಂಗಳ ಮಗುವನ್ನು ಕಾರ್‌ನಲ್ಲೇ ಬಿಟ್ಟು ಹೋಗಿದ್ದು, ಅಧಿಕ ತಾಪಮಾನದಿಂದ ಮಗು ಮೃತಪಟ್ಟಿದೆ.
ಜೋಯಲ್ ಹಾಗೂ ಜಾಲ್ಮೈನ್ ದಂಪತಿ ತಮ್ಮ ಮೂವರು ಮಕ್ಕಳ ಜೊತೆ ಪಾರ್ಟಿಗೆ ಹೋಗಿದ್ದರು, ಪಾರ್ಟಿಯಿಂದ ಬರುವಾಗ ಮಧ್ಯರಾತ್ರಿ 3 ಗಂಟೆಯಾಗಿತ್ತು. ಪತ್ನಿಗೆ ಮಕ್ಕಳನ್ನು ಕರೆದುಕೊಂಡು ಒಳಗೆ ಬರುವಂತೆ ಪತಿ ಹೇಳಿ ಒಳಗೆ ಬಂದಿದ್ದಾರೆ. ಪತ್ನಿ ಮಗುವನ್ನು ನೋಡಲು ಹೋದಾಗ ಕಾರ್‌ನ ನಾಲ್ಕೂ ಬಾಗಿಲು ಬಂದ್ ಆಗಿದೆ. ಹಾಗಾಗಿ ಮಗುವನ್ನು ಪತಿ ಕರೆದುಕೊಂಡು ಬಂದಿದ್ದಾರೆ ಎಂದು ಪತ್ನಿ ಒಳಗೆ ಹೋಗಿ ಮಲಗಿದ್ದಾರೆ.
ಮಗಳು ಕಾರ್‌ನಲ್ಲೇ ಇರುವುದು ಯಾರ ಗಮನಕ್ಕೂ ಬಂದಿಲ್ಲ. ಅವಳ ಸಹೋದರರು ಅಪ್ಪ ಅಮ್ಮನ ಜೊತೆ ಮಗು ಮಲಗಿದೆ ಎಂದು ಸುಮ್ಮನಾಗಿದ್ದಾರೆ.
ಮಕ್ಕಳನ್ನು ಐದು ನಿಮಿಷಕ್ಕೂ ಕಾರ್‌ನಲ್ಲಿ ಬಿಡಬೇಡಿ, ಉಸಿರುಗಟ್ಟಿ ಮಕ್ಕಳು ಜೀವಚೆಲ್ಲುವ ಸಾಧ್ಯತೆಗಳಿವೆ, ಮಕ್ಕಳ ವಿಷಯದಲ್ಲಿ ಸದಾ ಜಾಗ್ರತೆ ಇರಲಿ.