ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಆಪ್ ಸಂಸದ ರಾಘವ್ ಚಡ್ಡಾ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಈ ತಿಂಗಳ ಕೊನೆಯಲ್ಲಿ ರಾಜಸ್ಥಾನದಲ್ಲಿ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ.
ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಮದುವೆ ಸುದ್ದಿ ಇದೀಗ ಟ್ರೆಂಡಿಂಗ್ ಆಗಿದೆ. ಇವರ ನಿಶ್ಚಿತಾರ್ಥವು ಮೇ ತಿಂಗಳಲ್ಲಿ ದೆಹಲಿಯ ಕಪುರ್ತಲಾ ಹೌಸ್ನಲ್ಲಿ ನಡೆಯಿತು. ವಿವಾಹ ಸಮಾರಂಭವು ಸೆಪ್ಟೆಂಬರ್ 17 ರಂದು ಪ್ರಾರಂಬವಾಗಿ ಸೆಪ್ಟೆಂಬರ್ 24 ರಂದು ಈ ಆಚರಣೆಗಳು ಕೊನೆಗೊಳ್ಳಲಿವೆ. ಮದುವೆಗೆ ಹಲವು ರಾಜಕೀಯ ನಾಯಕರು ಆಗಮಿಸುವ ಹಿನ್ನೆಲೆಯಲ್ಲಿ ಹೋಟೆಲ್ಗಳಿಗೆ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ.
ಸೆಪ್ಟೆಂಬರ್ 23 ಮತ್ತು 24 ರಂದು ರಾಜಸ್ಥಾನದ ಉದಯಪುರದಲ್ಲಿರುವ ಲೀಲಾ ಪ್ಯಾಲೇಸ್, ದಿ ಒಬೆರಾಯ್ ಉದಯ್ ವಿಲಾಸ್ನಲ್ಲಿ ಮದುವೆ ಸಮಾರಂಭ ನಡೆಯಲಿದೆ. 200ಕ್ಕೂ ಹೆಚ್ಚು ಅತಿಥಿಗಳು ಹಾಗೂ 50ಕ್ಕೂ ಹೆಚ್ಚು ವಿವಿಐಪಿ ಅತಿಥಿಗಳಿಗೆ ಅವಕಾಶ ಕಲ್ಪಿಸಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಹಲ್ದಿ, ಮೆಹಂದಿ ಮತ್ತು ಸಂಗೀತ ಆಚರಣೆಗಳು ಸೆಪ್ಟೆಂಬರ್ 23 ರಂದು ಪ್ರಾರಂಭವಾಗುತ್ತವೆ. ಮದುವೆಯ ನಂತರ ಹರಿಯಾಣದ ಗುರುಗ್ರಾಮ್ನಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ.