ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಪರಿಣಿತಿ ಚೋಪ್ರಾ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಫಿಟ್ ಆಗಿದ್ದರು. ಸಿನಿಮಾಗಳಿಗಾಗಿ ಪರಿಣಿತಿ ತೂಕ ಹೆಚ್ಚಿಸಿಕೊಳ್ಳೋದಕ್ಕೆ ಹಿಂದೆ ಮುಂದೆ ನೋಡುವವರಲ್ಲ.
ಪರಿಣಿತಿ ದಪ್ಪ ಇದ್ದಾರೆ ಎನ್ನುವ ಕಾರಣಕ್ಕೆ ಸಾಕಷ್ಟು ಟ್ರೋಲ್ ಆಗಿದ್ದಾರೆ. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿರುವ ಅಮರ್ ಸಿಂಗ್ ಚಮ್ಕಿಲಾ ಸಿನಿಮಾಗಾಗಿ ಪರಿಣಿತಿ 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.
ಇದೀಗ ಸಿನಿ ರಂಗದಲ್ಲಿ ತಮ್ಮ ಆರಂಭಿಕ ದಿನಗಳ ಬಗ್ಗೆ ಪರಿ ಮಾತನಾಡಿದ್ದಾರೆ. ನಾನು ತುಂಬ ಶ್ರೀಮಂತ ಕುಟುಂಬದಿಂದ ಬಂದವಳಲ್ಲ. ನಾನು ಮಧ್ಯಮವರ್ಗದ ಹುಡುಗಿ. ಬಾಲಿವುಡ್ ಹೇಗೆ ಎಂಬುದು ನನಗೆ ಅರ್ಥವಾಗಿರಲಿಲ್ಲ. ಮುಂಬೈ ಜನ ಹೇಗೆ ಎಂಬುದು ಕೂಡ ಗೊತ್ತಿರಲಿಲ್ಲ. ಜಿಮ್ ಟ್ರೇನರ್ ಹಾಗೂ ಡಯೆಟಿಷಿಯನ್ಗೆ ಪ್ರತಿ ತಿಂಗಳು 4 ಲಕ್ಷ ರೂಪಾಯಿ ನೀಡಲು ನನ್ನ ಬಳಿ ಹಣ ಇರಲಿಲ್ಲ. ಆಗಿನ್ನೂ ನಾನು 3ನೇ ಸಿನಿಮಾ ಮಾಡುತ್ತಿದ್ದೆ. ನನ್ನ ಮೊದಲ ಸಿನಿಮಾಗೆ 5 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿತ್ತು. ಅದು ಒಂದು ತಿಂಗಳಿನ ಎಲ್ಲ ಖರ್ಷಿಗೆ ಸಾಕಾಗುತ್ತಿರಲಿಲ್ಲ ಎಂದು ಪರಿಣಿತಿ ಹೇಳಿಕೊಂಡಿದ್ದಾರೆ.