ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ದಿನದಲ್ಲೇ ಭಾರತದ ತಾರಾ ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಫೈನಲ್ ಫೈನಲ್ ಪ್ರವೇಶಿಸುವ ಮೂಲಕ ಪದಕದ ಆಸೆ ಮೂಡಿಸಿದ್ದಾರೆ.
6 ಸುತ್ತುಗಳ ಸ್ಪರ್ಧೆಯಲ್ಲಿ ಮನು ಭಾಕರ್ 580 ಅಂಕಗಳೊಂದಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಇನ್ನು ಮಹಿಳೆಯರ 10 ಮೀಟರ್ ಫೈನಲ್ ಪಂದ್ಯವು ನಾಳೆ ಅಂದರೆ ಜುಲೈ 28ರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.
60 ಪ್ರಯತ್ನಗಳ ಪೈಕಿ ಮನು ಭಾಕರ್ 27 ಬಾರಿ 10ರ ಸರ್ಕರ್‌ಗೆ ಗುರಿ ಇಡುವ ಮೂಲಕ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು. ಕಳೆದ ಬಾರಿ ಅಂದರೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನು ಭಾಕರ್ ಮೊದಲ ಸೀರಿಸ್‌ನಲ್ಲಿ 100ಕ್ಕೆ 98 ಅಂಕ ಕಲೆಹಾಕಿದ್ದರು. ಆದರೆ ಎರಡನೇ ಸುತ್ತಿನ ಸಂದರ್ಭದಲ್ಲಿ ಅವರ ಪಿಸ್ತೂಲ್ ಕೈಕೊಟ್ಟಿತ್ತು. ಪಿಸ್ತೂಲ್ ಸರಿ ಪಡಿಸಲು ಸಮಯಾವಕಾಶ ನೀಡಲಾಗಿತ್ತು. ಈ ವೇಳೆ ಹೆಚ್ಚಿನ ಸಮಯ ವ್ಯಯ ಮಾಡಿದ್ದರಿಂದಾಗಿ ಕೊನೆಗೆ 12ನೇ ಸ್ಥಾನಕ್ಕೆ ಕುಸಿಯುವ ಮೂಲಕ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದ್ದರು.
ಕಳೆದ ಟೋಕಿಯೋ ಒಲಿಂಪಿಕ್ಸ್ ವೈಫಲ್ಯ ಮರೆತು ಪ್ಯಾರಿಸ್ ಕೂಟದಲ್ಲಿ ಪಾಲ್ಗೊಂಡಿರುವ ಮನು ಭಾಕರ್ ಇದೀಗ ಮೂರನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದಾರೆ. ಮೊದಲೆರಡು ಸ್ಥಾನದಲ್ಲಿರುವ ಶೂಟರ್‌ಗಳು 582 ಅಂಕ ಕಲೆಹಾಕಿದರೆ, ಮನು ಭಾಕರ್ 580 ಅಂಕಗಳನ್ನು ಗಳಿಸುವ ಮೂಲಕ ಪದಕದ ಆಸೆ ಮೂಡಿಸಿದ್ದಾರೆ.
ಇದೀಗ ಫೈನಲ್‌ನಲ್ಲಿ 8 ಶೂಟರ್‌ಗಳು ಮೂರು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದು, ಮನು ಭಾಕರ್ ಪದಕದ ಭರವಸೆ ಮೂಡಿಸಿದ್ದಾರೆ.