ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ಸ್ ತಲುಪಿದ್ದಾರೆ.
ಗುಂಪು ಹಂತದಲ್ಲಿ ಇವರಿಬ್ಬರ ಪ್ರಭಾವಶಾಲಿ ಪ್ರದರ್ಶನವು ಕೊನೆಯ ಎಂಟರಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿತು.
ಸಾತ್ವಿಕ್-ಚಿರಾಗ್ ಜರ್ಮನಿಯ ಮಾರ್ಕ್ ಲ್ಯಾಮ್ಸ್ಫಸ್ ಮತ್ತು ಮಾರ್ವಿನ್ ಸೀಡೆಲ್ ಅವರನ್ನು ಎದುರಿಸಬೇಕಿತ್ತು, ಆದರೆ ಲ್ಯಾಮ್ಸ್ಫಸ್ ಅವರ ಗಾಯದಿಂದಾಗಿ ಜರ್ಮನ್ ಜೋಡಿ ಹಿಂದೆ ಸರಿದರು. ಹೀಗಾಗಿ ಕ್ವಾರ್ಟರ್ ಫೈನಲ್ ಸ್ಥಾನ ಖಚಿತಪಡಿಸಿಕೊಂಡರು.
ವಿಶ್ವದ 3ನೇ ಶ್ರೇಯಾಂಕಿತ ಜೋಡಿ ಪ್ಯಾರಿಸ್ 2024ರ ಅಭಿಯಾನವನ್ನು 40ನೇ ಶ್ರೇಯಾಂಕಿತ ಫ್ರಾನ್ಸ್ನ ಲ್ಯೂಕಾಸ್ ಕಾರ್ವಿ ಮತ್ತು ರೋನನ್ ಲಾಬರ್ ವಿರುದ್ಧ ಜಯಗಳಿಸುವ ಮೂಲಕ ಆರಂಭಿಸಿತು. ಗುಂಪಿನ ಅಗ್ರ ಸ್ಥಾನಕ್ಕಾಗಿ ಭಾರತ ಮತ್ತು ಇಂಡೋನೇಷ್ಯಾ ಜೋಡಿಗಳು ಮಂಗಳವಾರ ಸ್ಪರ್ಧಿಸಲಿವೆ.