Paris Olympics | ಬ್ಯಾಡ್ಮಿಂಟನ್‌ ಸೆಮಿಫೈನಲ್‌: ಭಾರತದ ಲಕ್ಷ್ಯ ಸೇನ್‌ ಗೆ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್‌ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಲಕ್ಷ್ಯ ಸೇನ್‌ ಭಾನುವಾರ ನಡೆದ​ ಸೆಮಿಫೈನಲ್‌ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ವಿಶ್ವದ ಖ್ಯಾತ ಶಟ್ಲರ್​ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ 20-22 21-14 ನೇರ ಗೇಮ್​ಗಳ ಅಂತರದಿಂದ ಸೋಲು ಕಂಡು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.

ಇನ್ನು ಕಂಚಿನ ಪದಕ ಸ್ಪರ್ಧೆಯಲ್ಲಿ ಆಡಲಿದ್ದಾರೆ.​

ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದ ಮೊದಲ ಗೇಮ್​ನಲ್ಲಿ ಎದುರಾಳಿ ವಿಕ್ಟರ್‌ ಅಕ್ಸೆಲ್ಸೆನ್‌ 2 ಅಂಕಗಳಿಸಿದರೂ ಖಾತೆ ತೆರೆಯದ ಲಕ್ಷ್ಯ ಸೇನ್‌ ಫಿನಿಕ್ಸ್​ನಂತೆ ಎದ್ದು ಬಂದು ಮುನ್ನಡೆ ಸಾಧಿಸಿದರು. 8 ಅಂಕ ಗಳಿಸುವ ತನಕ ಉಭಯ ಆಟಗಾರರು ಸಮಾನವಾಗಿ ಸಾಗಿದರು. ಆ ಬಳಿಕ ಸೇನ್​ ಸತತವಾಗಿ ಅಂಕ ಗಳಿಸಿ ಇನ್ನೇನು ಒಂದು ಅಂಕ ಗಳಿಸಿ ಗೆಲುವು ಸಾಧಿಸುತ್ತಾರೆ ಎನುವಷ್ಟರಲ್ಲಿ 3 ಅಂಕ ಹಿನ್ನಡೆಯಲ್ಲಿದ್ದ ಅಕ್ಸೆಲ್ಸೆನ್‌ ಆಕ್ರಮಣಕಾರಿ ಆಟದ ಮೂಲಕ ಗೆಲುವು ಸಾಧಿಸಿದರು.

ದ್ವಿತೀಯ ಗೇಮ್​ನಲ್ಲಿ ಆರಂಭದಿಂದಲೇ ಬಲಿಷ್ಠ ಹೊಡೆತಗಳ ಮೂಲಕ ಆಕ್ರಮಣಕಾರಿ ಆಟವಾಡಿದ ಸೇನ್​ 7 ಅಂಕ ಗಳಿಸುವ ತನಕ ಎದುರಾಳಿಗೆ ಅಂಕವನ್ನೇ ಬಿಟ್ಟುಕೊಡದೆ ಪ್ರಾಬಲ್ಯ ಮರೆದರು. ಆ ಬಳಿಕ ದೀಢಿರ್​ ಕುಸಿತ ಕಂಡು ಸತತವಾಗಿ ಅಂಕ ಬಿಟ್ಟುಕೊಟ್ಟು ಮತ್ತೆ ಹಿನ್ನಡೆ ಅನುಭವಿಸಿ ಸೋಲು ಕಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!