Paris Olympics | ಪ್ರೀ-ಕ್ವಾರ್ಟರ್‌ ಫೈನಲ್ ಗೆ ದೀಪಿಕಾ ಕುಮಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಲಿಂಪಿಕ್ಸ್​ನಲ್ಲಿ ಭಾರತದ ಸ್ಟಾರ್‌ ಬಿಲ್ಗಾರ್ತಿ ದೀಪಿಕಾ ಕುಮಾರಿ ಅವರು ಪ್ರೀ-ಕ್ವಾರ್ಟರ್​ ಫೈನಲ್ ​ ಪ್ರವೇಶಿಸುವ ಮೂಲಕ ತಮ್ಮ ಪದಕದ ಆಸೆಯನ್ನು ಜೀವಂತವಿರಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ ವೈಯಕ್ತಿಕ ಎಲಿಮಿನೇಷನ್‌ ಸುತ್ತಿನ ಮೊದಲ ಪಂದ್ಯದಲ್ಲಿ ದೀಪಿಕಾ ಅವರು ಎಸ್ಟೋನಿಯಾದ ರೀನಾ ಪರ್ನಾಟ್‌ ವಿರುದ್ಧ 6-5(29-28, 26-27, 27-27, 24-27, 30-27) ಅಂತರದಿಂದ ಗೆದ್ದು ದ್ವಿತೀಯ ಸುತ್ತಿಗೆ ಪ್ರವೇಶ ಪಡೆದರು. ಆ ಬಳಿಕ ನಡೆದ 2ನೇ ಸುತ್ತಿನಲ್ಲಿ ನೆದರ್ಲ್ಯಾಂಡ್ಸ್​ನ ಕ್ವಿಂಟಿ ರೋಫೆನ್ ಅವರನ್ನು 6-2 ಅಂತರದಿಂದ ಮಣಿಸಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು. ಈ ಬಾರಿ ಪದಕ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.

ದೀಪಿಕಾ ಅವರು ಪ್ರೀ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ವಿಶ್ವದ 13 ಶ್ರೇಯಾಂಕದ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರ ಸವಾಲು ಎದುರಿಸಲಿದ್ದಾರೆ. ಭಜನ್ ಕೌರ್ ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ ಸೆಣಸಾಡಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!