Paris Olympics | ಹಾಕಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹಾಕಿಯಲ್ಲಿ ಭಾರತ ಹಾಗೂ ಬ್ರಿಟನ್‌ ನಡುವಿನ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಸ್ಟೇಡ್ ಯ್ವೆಸ್-ಡು-ಮನೋಯಿರ್‌ನಲ್ಲಿ ಶೂಟ್-ಔಟ್ ಮೂಲಕ ಗ್ರೇಟ್ ಬ್ರಿಟನ್ ಅನ್ನು ಸೋಲುಣಿಸಿದೆ. ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕಕ್ಕೆ ಭಾರತ ಒಂದು ಗೆಲುವಿನ ಅಂತರದಲ್ಲಿದೆ. ಸೆಮಿಫೈನಲ್‌ನಲ್ಲಿ ಜರ್ಮನಿ ಅಥವಾ ಅರ್ಜೆಂಟೀನಾವನ್ನು ಭಾರತ ತಂಡ ಎದುರಿಸಲಿದೆ.

ಪಂದ್ಯದ 17 ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ತನ್ನ ಏಳನೇ ಗೋಲು ಗಳಿಸಿದರು. ಆ ಮೂಲಕ ಭಾರತ ಮುನ್ನಡೆ ಸಾಧಿಸಿತು. ಹರ್ಮನ್‌ಪ್ರೀತ್ 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು. ಇದಾದ ಐದು ನಿಮಿಷದಲ್ಲೇ ಲೀ ಮಾರ್ಟನ್ ಗ್ರೇಟ್ ಬ್ರಿಟನ್‌ಗೆ ಸಮಬಲ ಸಾಧಿಸಿದರು.

ಪೂರ್ಣಾವಧಿಯ ನಂತರ ಪಂದ್ಯ 1-1 ರಲ್ಲಿ ಕೊನೆಗೊಂಡರೆ, ಭಾರತವು ಶೂಟ್-ಔಟ್ ಅನ್ನು 4-2 ರಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!