ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ಕೂಟದಲ್ಲಿ ಇಂದು ನಡೆದ ಮಹಿಳಾ ಆರ್ಚರಿ ಶ್ರೇಯಾಂಕ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಅಂಕಿತಾ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಒಳಗೊಂಡ ತಂಡ 4ನೇ ಸ್ಥಾನಗಳಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ.
ವೈಯಕ್ತಿಕ ವಿಭಾಗದಲ್ಲಿ ಅಂಕಿತಾ 11ನೇ ಸ್ಥಾನ, ಭಜನ್ ಮತ್ತು ದೀಪಿಕಾ ಕ್ರಮವಾಗಿ 22 ಮತ್ತು 23ನೇ ಸ್ಥಾನ ಪಡೆದರು. ಕೊರಿಯಾ 2046 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡರೆ, ಚೀನಾ(1996) ಮತ್ತು ಮೆಕ್ಸಿಕೊ(1986) ಅಂಕದೊಂದಿಗೆ ಕ್ರಮವಾಗಿ 2 ಮತ್ತು 3 ನೇ ಸ್ಥಾನ ಗಳಿಸಿತು. ಭಾರತ (1983) ಅಂಕದೊಂದಿಗೆ 4ನೇ ಸ್ಥಾನ ಪಡೆದಿದೆ.
ಭಾರತ ಪರ ಅಂಕಿತಾ ಎಲ್ಲ ಸುತ್ತುಗಳಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಗಮನಸೆಳೆದರು.
ಅರ್ಹತಾ ಸುತ್ತಿನಲ್ಲಿ 53 ದೇಶಗಳ 128 ಆರ್ಚರ್ ಸ್ಪರ್ಧಿಸಿ ಒಬ್ಬೊಬ್ಬರಿಗೆ ತಲಾ 72 ಬಾಣಗಳ ಗುರಿ ಲಭಿಸಲಿದೆ. ಇಲ್ಲಿ ಟಾಪ್-10 ಸ್ಥಾನ ಸಂಪಾದಿಸಿದರೆ ನಾಕೌಟ್ ಹಂತಕ್ಕೆ ಪ್ರವೇಶ ಸಿಗುತ್ತದೆ. ಇದೀಗ ಭಾರತ ಮಹಿಳಾ ತಂಡ ನಾಲ್ಕನೇ ಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ.