Paris Olympics | ಭಾರತದ ಆಟಗಾರನನ್ನೇ ಸೋಲಿಸಿ ಕ್ವಾರ್ಟರ್​​ ಫೈನಲ್ಸ್​ಗೇರಿದ ಲಕ್ಷ್ಯ ಸೇನ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್​ ಒಲಿಂಪಿಕ್ಸ್​ನ ಪುರುಷರ ಸಿಂಗಲ್ಸ್​ನಲ್ಲಿ ಭಾರತದವರೇ ಆದ ಎಚ್​ಎಸ್​ ಪ್ರಣಯ್ ಅವರನ್ನು ಸೋಲಿಸಿ ಲಕ್ಷ್ಯ ಸೇನ್ ಕ್ವಾರ್ಟರ್​​ ಫೈನಲ್ಸ್​ಗೆ ಪ್ರವೇಶ ಪಡೆದಿದ್ದಾರೆ.

ಪಂದ್ಯದಲ್ಲಿ ಲಕ್ಷ್ಯ 21-12, 21-6 ಅಂತರದಲ್ಲಿ ಪ್ರಣಯ್ ವಿರುದ್ಧ ಭರ್ಜರಿ ಜಯ ಸಾಧಿಸಿದರು.

ಲಕ್ಷ್ಯ ಮತ್ತು ಎಚ್.ಎಸ್.ಪ್ರಣಯ್ ಇಬ್ಬರೂ ಪರಸ್ಪರ ಗೆಲುವಿಗಾಗಿ ಹೋರಾಟ ಶುರುಮಾಡಿದರು. ಪಂದ್ಯದ ಆರಂಭದಲ್ಲಿಯೇ ಪ್ರಣಯ್ 1-5 ಹಿನ್ನಡೆ ಅನುಭವಿಸಿದ್ದರು.
ಆರಂಭಿಕ ಗೇಮ್ ನ ವಿರಾಮದ ವೇಳೆಗೆ ಲಕ್ಷ್ಯ 11-6ರಲ್ಲಿ ಮುನ್ನಡೆ ಸಾಧಿಸಿದರು. ಪ್ರಣಯ್ 7-13 ಅಂತರದಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ತಿರುಗೇಟು ನೀಡಲು ಯತ್ನಿಸಿದರು. ಎರಡನೇ ಗೇಮ್ ನಲ್ಲಿ ಪ್ರಣಯ್ ವಿರುದ್ಧ ಲಕ್ಷ್ಯ ಭರ್ಜರಿ ಮುನ್ನಡೆ ಸಾಧಿಸಿದರು .

ಲಕ್ಷ್ಯ ಕ್ವಾರ್ಟರ್ ಫೈನಲ್​​ನಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!