ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ತಾರಾ ಟೇಬಲ್ ಟೆನಿಸ್ ಪಟು ಮಣಿಕಾ ಬಾತ್ರಾ ನಿರಾಸೆ ಎದುರಿಸಿದ್ದಾರೆ.ಮಹಿಳಾ ಸಿಂಗಲ್ಸ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದಾರೆ.
ಒಲಿಂಪಿಕ್ ಇತಿಹಾಸದಲ್ಲೇ ಟೇಬಲ್ ಟೆನಿಸ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಟಿಟಿ ಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
29 ವರ್ಷದ ಮಣಿಕಾ ಬುಧವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತನಗಿಂತ ಮೇಲಿನ ಶ್ರೇಯಾಂಕದ ಜಪಾನ್ನ ಮಿಯು ಹಿರಾನೋ ವಿರುದ್ಧ 4-1(11-6, 11-9, 12-14, 11-8, 11-6) ಅಂತರದಲ್ಲಿ ಸೋಲು ಕಂಡರು. ವಿಶ್ವ ಶ್ರೇಯಾಂಕದಲ್ಲಿ 28ನೇ ಸ್ಥಾನ ಹೊಂದಿರುವ ಮಣಿಕಾ ಅವರು 13 ಶ್ರೇಯಾಂಕದ ಮಿಯು ಹಿರಾನೋ ಅವರ ಬಲಿಷ್ಠ ಹೊಡೆತಗಳಿಗೆ ತಡೆಯೊಡ್ಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿ ಸೋಲು ಕಂಡರು.