ಶೀಘ್ರದಲ್ಲೇ ನೂತನ ಮಸೂದೆಗಳಿಗೆ ಸಂಸತ್‌ ಅನುಮೋದನೆ: ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಎವಿಡೆನ್ಸ್‌ ಕಾಯ್ದೆಯನ್ನು ಬದಲಿಸುವ ಹೊಸ ಮಸೂದೆಗಳನ್ನು ಕೆಂದ್ರ ಗೃಹ ಸಚಿವ ಅಮಿತ್ ಶಾ ಆಗಸ್ಟ್‌ ತಿಂಗಳಲ್ಲಿ ಪರಿಚಯಿಸಿದ್ದು, ಇದೀಗ ಈ ನೂತನ ಮಸೂದೆಗಳನ್ನು ಶೀಘ್ರದಲ್ಲೇ ಸಂಸತ್‌ ಅಂಗೀಕಾರ ಪಡೆಯಲಾಗುವುದು ಎಂದು ಶಾ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆ (IPC), CrPC ಮತ್ತು ಇಂಡಿಯನ್ ಎವಿಡೆನ್ಸ್ ಕಾಯ್ದೆಯನ್ನು ಬದಲಿಸುವ ಮೂರು ಹೊಸ ಮಸೂದೆಗಳನ್ನು ಸಂಸತ್ತಿನಲ್ಲಿ ಶೀಘ್ರದಲ್ಲೇ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿ ಮಾಡಿದ ಕಾನೂನುಗಳನ್ನು ತ್ಯಜಿಸುತ್ತಿದೆ ಮತ್ತು ಹೊಸ ಆತ್ಮವಿಶ್ವಾಸ ಹಾಗೂ ಹೊಸ ಭರವಸೆಗಳೊಂದಿಗೆ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದು ಹೇಳಿದರು.

ಇದನ್ನು ಓದಿ: ಇನ್ಮೇಲೆ 420 ಅಂತ ಸುಮ್ನೆ ಯಾರನ್ನೂ ಅಪಹಾಸ್ಯ ಮಾಡ್ಬೇಡಿ: ಬದಲಾಗ್ತಿದೆ ಐಪಿಸಿ ಸೆಕ್ಷನ್ 420 ಕಾನೂನು!
.
ಹೊಸ ಕಾನೂನುಗಳು ಜನರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿವೆ ಎಂದೂ ಅವರು ಹೇಳಿದರು. ಇನ್ನು, ಮಹಿಳಾ ಐಪಿಎಸ್ ಕೆಡೆಟ್‌ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಪ್ರಗತಿಯಲ್ಲಿದೆ ಎಂದು ಶ್ಲಾಘಿಸಿದರು.

ಸಿಆರ್‌ಪಿಸಿ, ಐಪಿಸಿ ಮತ್ತು ಎವಿಡೆನ್ಸ್ ಕಾಯ್ದೆ – ಈ ಮೂರು ಕಾನೂನುಗಳನ್ನು 1850 ರ ಸುಮಾರಿಗೆ ರಚಿಸಲಾಗಿದೆ. ಈ ಮೂರು ಕಾನೂನುಗಳಲ್ಲಿ ಸರ್ಕಾರವು ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಭಾರತೀಯ ಸಂಸತ್ತಿನಲ್ಲಿ ಮೂರು ಹೊಸ ಕಾನೂನುಗಳನ್ನು ಮಂಡಿಸಲಾಗಿದೆ. ಗೃಹ ಸಚಿವಾಲಯದ ಸಂಸತ್ತಿನ ಸಮಿತಿಯ ಮೂಲಕ ಇದು ಸಾಗುತ್ತಿದ್ದು, ಸ್ವಲ್ಪ ಸಮಯದ ನಂತರ ಈ ಕಾನೂನುಗಳು ಅಂಗೀಕರಿಸಲ್ಪಡುತ್ತವೆ ಮತ್ತು ಈ ಕಾನೂನುಗಳ ಆಧಾರದ ಮೇಲೆ ನಮ್ಮ ದೇಶದ ಹೊಸ ಕ್ರಿಮಿನಲ್ ನ್ಯಾಯ
ವ್ಯವಸ್ಥೆಯು ಪ್ರಾರಂಭವಾಗುತ್ತದೆ ಎಂದೂ ಕೇಂದ್ರ ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

‘ಭಾರತೀಯ ನ್ಯಾಯ ಸಂಹಿತೆ 2023’, ‘ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023’ ಮತ್ತು ‘ಭಾರತೀಯ ಸಾಕ್ಷಿ ಮಸೂದೆ 2023’ ಕುರಿತ ಕರಡು ವರದಿಗಳನ್ನು ಪರಿಗಣಿಸಲು ಮತ್ತು ಅಳವಡಿಸಿಕೊಳ್ಳಲು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸಭೆ ಇಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಸಂಸತ್ತಿನ ಕೆಳಮನೆಯಲ್ಲಿ ಆಗಸ್ಟ್ 11 ರಂದು ಈ ಮಸೂದೆಗಳನ್ನು ಪರಿಚಯಿಸಲಾಯಿತು. ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ (IPC) 1860, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC), 1973, ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ, 1872 ಅನ್ನು ಬದಲಿಸಲು ಪ್ರಯತ್ನಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!