ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್ ಈಗ ತನ್ನ ಮಿತಿಗಳನ್ನು ಮೀರುತ್ತಿದೆ. ಪ್ರತಿಯೊಂದಕ್ಕೂ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯನ್ನು ಮುಚ್ಚಬೇಕು ಎಂದು ಬಿಜೆಪಿ (BJP) ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.
ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ರಾಮ ಮಂದಿರ ಆಗಬಹುದು, ಜ್ಞಾನವಾಪಿ ಮಸೀದಿಯಾಗಬಹುದು, ಮಥುರಾ ಕೃಷ್ಣ ದೇವಸ್ಥಾನದ ವಿಚಾರ ಬಂದಾಗ ಸುಪ್ರೀಂ ಕೋರ್ಟ್ ಕಾಗದ ಎಲ್ಲಿದೆ ಎಂದು ಕೇಳುತ್ತದೆ. ಮೊಘಲರ ವಿಷಯ ಬಂದಾಗ ಯಾವುದನ್ನು ಕೇಳುವುದಿಲ್ಲ ಎಂದು ಹೇಳಿದರು.
ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ಸಂಸತ್ತು ಈ ದೇಶದ ಕಾನೂನನ್ನು ರೂಪಿಸುತ್ತದೆ. ನೀವು ಆ ಸಂಸತ್ತನ್ನು ನಿರ್ದೇಶಿಸುತ್ತೀರಾ? ನೀವು ಹೊಸ ಕಾನೂನನ್ನು ಹೇಗೆ ಮಾಡಿದ್ದೀರಿ? ಯಾವ ಕಾನೂನಿನಲ್ಲಿ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬರೆಯಲಾಗಿದೆ? ಇದರರ್ಥ ನೀವು ಈ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯಲು ಬಯಸುತ್ತೀರಿ. ಮುಂದಿನ ಸಂಸತ್ತು ಅಧಿವೇಶನದಲ್ಲಿ ಇದರ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.