NDA ಮೈತ್ರಿ ಅಭ್ಯರ್ಥಿಗೆ ಗೆಲುವು ಎಂದ ಗಿಣಿಶಾಸ್ತ್ರ: ಅರಣ್ಯ ಇಲಾಖೆಯಿಂದ ಗಿಣಿ ಮಾಲೀಕನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕಡಲೂರಿನಲ್ಲಿ ಪಟ್ಟಾಲಿ ಮಕ್ಕಳ್ ಕಚ್ಚಿ ಅಭ್ಯರ್ಥಿ ನಿರ್ದೇಶಕ ತಂಗರಬಚ್ಚನ್ ಗೆಲುವು ಸಾಧಿಸಲಿದ್ದಾರೆ ಎಂದು ಗಿಣಿಶಾಸ್ತ್ರದ ಗಿಣಿ ಭವಿಷ್ಯ ನುಡಿದಿತ್ತು. ಇತ್ತ ಗಿಳಿಗಳ ಮಾಲೀಕ ಸೆಲ್ವರಾಜ್‌ ಹಾಗೂ ಆತನ ಸಹೋದರ ಸೀನುವಾಸನ್‌ ಅವರನ್ನು ತಮಿಳುನಾಡು ಅರಣ್ಯ ಇಲಾಖೆ ಬಂಧಿಸಿದೆ.

ಗಿಳಿಯನ್ನು ಅಕ್ರಮವಾಗಿ ಸೆರೆಯಲ್ಲಿಟ್ಟ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಕಡಲೂರಿನಲ್ಲಿ ಎನ್‌ಡಿಎ ಮೈತ್ರಿಯ ಭಾಗವಾಗಿರುವ ಪಿಎಂಕೆಯ ತಂಗರಬಚ್ಚನ್ ಗೆಲುವು ಸಾಧಿಸಲಿದ್ದಾರೆ ಎಂದು ಗಿಣಿಶಾಸ್ತ್ರ ಭಾನುವಾರ ಭವಿಷ್ಯ ನುಡಿದಿತ್ತು.

ಕಡಲೂರು ಜಿಲ್ಲೆಯ ತೆನ್ನಂಪಕ್ಕಂನಲ್ಲಿರುವ ಆಕುಮುತ್ತು ಅಯ್ಯನಾರ್ ದೇವಸ್ಥಾನದ ಬಳಿ ಕಿಲಿ ಸೋತ್‌ಗೆ ಭೇಟಿ ನೀಡುತ್ತಿದ್ದ ಸೆಲ್ವರಾಜ್‌ನನ್ನು ತಮಿಳುನಾಡು ಸರ್ಕಾರದ ಅರಣ್ಯ ಇಲಾಖೆ ಬಂಧಿಸಿದೆ. ಕಡಲೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ನಿರ್ದೇಶಕ ತಂಗರಬಚ್ಚನ್ ಅವರು ಪಟ್ಟಾಲಿ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗಿಣಿ ಮರಿ ಹೇಳಿದ್ದನ್ನು ಸಹಿಸಲಾಗದೆ ಡಿಎಂಕೆ ಸರ್ಕಾರ ಈ ಸೇಡಿನ ಕ್ರಮ ಕೈಗೊಂಡಿದೆ. ಇದು ಫ್ಯಾಸಿಸಂನ ಪರಮಾವಧಿಯಾಗಿರುವುದರಿಂದ ಈ ಕೃತ್ಯ ಖಂಡನೀಯ ಎಂದು ಪಿಎಂಕೆ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಡಾ.ಅನ್ಬುಮಣಿ ರಾಮದಾಸ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಗಿಣಿಶಾಸ್ತ್ರದವನು ತಂಗರಬಚ್ಚನ್ ಗೆಲ್ಲುತ್ತಾರೆ ಎಂದು ಹೇಳಿದ್ದನ್ನು ಸಹಿಸದ ಡಿಎಂಕೆ ಸರ್ಕಾರ, ಚುನಾವಣಾ ಫಲಿತಾಂಶವನ್ನು ಹೇಗೆ ಸಹಿಸಿಕೊಳ್ಳುತ್ತದೆ? ಡಿಎಂಕೆ ಸರ್ಕಾರ, ತಂಗರಬಚ್ಚನ್‌ಗೆ ಮತ ಹಾಕಿದ್ದಕ್ಕೆ ಕಡಲೂರು ಕ್ಷೇತ್ರದ ಲಕ್ಷಾಂತರ ಜನರನ್ನು ಬಂಧಿಸುತ್ತದೆಯೇ? ಈ ನಡೆಯಿಂದ ಡಿಎಂಕೆಗೆ ಸೋಲಿನ ಭೀತಿ ಎದುರಾಗಿದೆ. ತರ್ಕಬದ್ಧ ಪಕ್ಷ ಎಂದು ಹೇಳಿಕೊಳ್ಳುವ ಡಿಎಂಕೆಗೆ ಸೋಲಿನ ಭವಿಷ್ಯದ ಸುದ್ಧಿಯನ್ನೂ ಸಹಿಸಲಾಗುತ್ತಿಲ್ಲ ಎಂದರೆ ಆ ಪಕ್ಷ ಎಷ್ಟು ಮೌಢ್ಯ ಮತ್ತು ಮೂಢನಂಬಿಕೆಯಲ್ಲಿ ಮುಳುಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದು ಟೀಕೆ ಮಾಡಿದ್ದಾರೆ.

ಗಿಳಿಯನ್ನು ಪಂಜರದಲ್ಲಿ ಸಾಕುವುದು ಅಪರಾಧ ಎಂದು ಸರ್ಕಾರ ಹೇಳಿದೆ ಮತ್ತು ಅದಕ್ಕಾಗಿಯೇ ಸೆಲ್ವರಾಜ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ. ತಮಿಳುನಾಡಿನಾದ್ಯಂತ ಲಕ್ಷಗಟ್ಟಲೆ ಗಿಳಿ ಜ್ಯೋತಿಷಿಗಳು ಅದೃಷ್ಟ ಹೇಳಲು ಗಿಳಿಗಳನ್ನು ಪಂಜರದಲ್ಲಿ ಇಡುತ್ತಾರೆ. ಇದೀಗ ಬಂಧಿತರಾಗಿರುವ ಜ್ಯೋತಿಷಿ ಹಲವು ವರ್ಷಗಳಿಂದ ಇದೇ ಸ್ಥಳದಲ್ಲಿ ಗಿಣಿಶಾಸ್ತ್ರ ಹೇಳುತ್ತಿದ್ದಾರೆ. ಆಗ ಆತನನ್ನು ಬಂಧಿಸಿರಲಿಲ್ಲ. ಎಂಕೆ ಸ್ಟ್ಯಾಲಿನ್‌ ಮುಖ್ಯಮಂತ್ರಿಯಾಗ್ತಾರಾ ಎಂದು ಅವರ ಹೆಂಡತಿ ನೂರಾರು ಗಿಣಿಶಾಸ್ತ್ರದವರಿಂದ ಭವಿಷ್ಯ ಕೇಳಿರಬಹುದು. ಅಂಥ ಯಾರನ್ನೂ ಬಂಧಿಸಿಲ್ಲ. ಆದರೆ, ತಂಗರಬಚ್ಚನ್ ಗೆಲುವು ಸಾಧಿಸುತ್ತದೆ ಎಂದು ಗಿಣಿಶಾಸ್ತ್ರ ಹೇಳಿದ್ದಕ್ಕೆ, ಗಿಣಿಯ ಮಾಲೀಕನನ್ನೇ ಬಂಧನ ಮಾಡಲಾಗಿದೆ.ಇದರ ಹಿಂದಿನ ಕಾರಣ ಸುಲಭವಾಗಿ ಅರ್ಥವಾಗುತ್ತದೆ ಎಂದು ರಾಮದಾಸ್ ಪ್ರಶ್ನಿಸಿದ್ದಾರೆ.

ತಮಿಳುನಾಡಿನ ಕಾಡುಗಳಲ್ಲಿ ಲಕ್ಷಾಂತರ ಮರಗಳು ಮತ್ತು ಸಾವಿರಾರು ಪ್ರಾಣಿಗಳು ನಾಶವಾಗುತ್ತಿವೆ. ಇದನ್ನೆಲ್ಲ ನೋಡುತ್ತಿರುವ ಡಿಎಂಕೆ ಸರ್ಕಾರ ಬಡ ಗಿಣಿಶಾಸ್ತ್ರಜ್ಞನ ಬಂಧಿಸುವ ಮೂಲಕ ತನ್ನ ಶೌರ್ಯ ಮೆರೆದಿದೆ. ಆ ಜ್ಯೋತಿಷಿಯ ಬದುಕಿಗೆ ಮಣ್ಣು ಹಾಕಿದೆ. ಇದಕ್ಕೆ ಕಾರಣರಾದವರಿಗೆ ಮುಂಬರುವ ಚುನಾವಣೆಯಲ್ಲಿ ತಮಿಳುನಾಡಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಅಡಿಯಲ್ಲಿ ಶೆಡ್ಯೂಲ್ II ಜಾತಿಗಳ ಅಡಿಯಲ್ಲಿ ಗಿಳಿಗಳನ್ನು ವರ್ಗೀಕರಿಸಲಾಗಿದೆ ಮತ್ತು ಪಕ್ಷಿಯನ್ನು ಸೆರೆಯಲ್ಲಿ ಇಡುವುದು ಅಪರಾಧ ಎಂದು ಕಡಲೂರು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜೆ ರಮೇಶ್ ಹೇಳಿದ್ದಾರೆ . ಬ್ಬರಿಗೂ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದು, ನಾಲ್ಕು ಗಿಳಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!