ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೆಟ್ರೋ ರೈಲು ನಿಗಮದ (DMRC) ಗೋಕುಲ್ಪುರಿ ಮೆಟ್ರೋ ನಿಲ್ದಾಣದ ಒಂದು ಭಾಗ ಕುಸಿದ ಪರಿಣಾಮ 53 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತನನ್ನು ವಿನೋದ್ ಕುಮಾರ್ ಎಂದು ಗುರುತಿಸಲಾಗಿದ್ದು, ಹತ್ತಿರದ ಕರವಾಲ್ ನಗರ ಪ್ರದೇಶದ ಶಹೀದ್ ಭಗತ್ ಸಿಂಗ್ ಕಾಲೋನಿ ನಿವಾಸಿ.ನಾಲ್ಕು ಜನರು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಮೆಟ್ರೋ ನಿಲ್ದಾಣದ ಬಳಿ ಒಬ್ಬ ವ್ಯಕ್ತಿ ತನ್ನ ಸ್ಕೂಟಿಯಲ್ಲಿದ್ದಾಗ, ಮೇಲಾವರಣದ ಒಂದು ಭಾಗವು ಅವರ ಮೇಲೆ ಬಿದ್ದಿದೆ.
ದೆಹಲಿಯಲ್ಲಿ ಗುರುವಾರ ಗೋಕುಲಪುರಿ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಪಕ್ಕದ ಗೋಡೆಯ ಒಂದು ಭಾಗ ಕುಸಿದಿದೆ. ದರಿಂದಾಗಿ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಸದ್ಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ರಸ್ತೆಯನ್ನು ಮುಚ್ಚಲಾಗಿದೆ. ಅಪಘಾತದ ನಂತರ, ಈ ಮಾರ್ಗದಲ್ಲಿ ಮೆಟ್ರೋ ರೈಲು ಪ್ರಸ್ತುತ ಒಂದೇ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ.