ಹಿಂದು ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ: ಮುಜರಾಯಿ ಇಲಾಖೆಗೆ ದೇಗುಲ ಆದಾಯ ದ್ವಿಗುಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದು ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ವಿಧೇಯಕ ವಿಧಾನಸಭೆಯಲ್ಲಿ ಇಂದು ಅಂಗೀಕಾರವಾಗಿದೆ. ಇದರಿಂದ ದೇವಸ್ಥಾನಗಳು ಕೊಡುತ್ತಿದ್ದ ಆದಾಯವನ್ನು ಸರ್ಕಾರ ದ್ವಿಗುಣಗೊಳಿಸಿದೆ.

ಮುಜರಾಯಿ ಇಲಾಖೆಗೆ ದೇವಾಲಯಗಳು ಕೊಡುತ್ತಿದ್ದ ಆದಾಯ ದ್ವಿಗುಣಗೊಳಿಸಲಾಗಿದೆ. 10 ಲಕ್ಷದಿಂದ ಒಂದು ಕೋಟಿ ರೂಪಾಯಿ ಆದಾಯ ಹೊಂದಿರುವ ದೇಗುಲಗಳು ಶೇ. 5 ರಷ್ಟು ಹಣ ಸಲ್ಲಿಸಬೇಕು. ಒಂದು ಕೋಟಿಗೂ ಅಧಿಕ ಆದಾಯ ಮೀರಿದ ದೇವಸ್ಥಾನಗಳು ಶೇಕಡ 10 ರಷ್ಟು ಹಣ ಸಲ್ಲಿಸಬೇಕು.

ಸಿ ಗ್ರೇಡ್ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗೆ ವಿಮೆ ಸೌಕರ್ಯ ಒದಗಿಸಲು ಬಿಲ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅರ್ಚಕರು, ದೇಗುಲ ಸಿಬ್ಬಂದಿ ಮೃತಪಟ್ಟಾಗ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಮೊದಲು ಮೃತಪಟ್ಟ ಕುಟುಂಬಕ್ಕೆ 35,000 ರೂ. ಕೊಡಲಾಗುತ್ತಿತ್ತು.

ಅರ್ಚಕರು, ದೇಗುಲ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ 5000 ದಿಂದ 50,000 ರೂ. ವರೆಗೆ ವಿದ್ಯಾರ್ಥಿ ವೇತನ ನೀಡಲು ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!