ರೈಲಿನ ಸೀಟ್ ಮೇಲಿದ್ದ ವಸ್ತು ನೋಡಿ ಪ್ರಯಾಣಿಕರು ಶಾಕ್, ಇದೆಂಥಾ ಕರ್ಮ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಲಿನ ಸೀಟ್‌ಗಳ ಮೇಲೆ ಕಡ್ಲೆಗಿಡ, ಪ್ಲಾಸ್ಟಿಕ್ ಬಾಟಲಿ, ತಿಂಡಿ ಕವರ್‌ಗಳು ಇರೋದು ಕಾಮನ್ ಆದರೆ ಅಂಬರ್‌ನಾಥ್ ಸ್ಲೋ ಲೋಕಲ್ ರೈಲಿನ ಸೀಟಿನಲ್ಲಿ ಬಳಸಿದ ಕಾಂಡಮ್ ಬಿದ್ದಿದೆ. ಸೀಟ್ ಮೇಲೆ ಈ ವಸ್ತುವನ್ನು ನೋಡಿ ಜನ ಕಕ್ಕಾಬಿಕ್ಕಿಯಾಗಿದ್ದಾರೆ. ರೈಲಿನಲ್ಲಿ ಸೀಟ್ ಇಲ್ಲದಿದ್ದರೂ ಆ ಸೀಟ್ ಮೇಲೆ ಕೂರೋದಿಲ್ಲ ಎಂದು ಜನ ಸುಮ್ಮನಾಗಿದ್ದಾರೆ.

ಪ್ರಯಾಣಿಕರೊಬ್ಬರು ಇದನ್ನು ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೆಂಥಾ ಅಸಹ್ಯ, ಇನ್ನೆಂಥಾ ಕಾಲ ಬಂತು ಎಂದು ಜನ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲೇಬೇಕು, ಪದೇ ಪದೆ ಇಂಥ ಘಟನೆಗಳು ಮರುಕಳಿಸಿದರೆ ಇರಿಸು ಮುರಿಸಾಗುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!