Wednesday, January 14, 2026
Wednesday, January 14, 2026
spot_img

ಪ್ರಯಾಣಿಕರೇ ರಜೆಯ ಮಜಾ ಸವಿಯಲು ಸಜ್ಜಾಗಿ: ಮೈಸೂರು-ಬೆಳಗಾವಿ ಮಧ್ಯೆ ಓಡಲಿವೆ ವಿಶೇಷ ರೈಲುಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ಸರಣಿ ರಜೆಗಳ ಸಂದರ್ಭದಲ್ಲಿ ಊರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಮೈಸೂರು ಮತ್ತು ಬೆಳಗಾವಿ ನಡುವೆ ಮೂರು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ.

ರೈಲು ವೇಳಾಪಟ್ಟಿ ಮತ್ತು ದಿನಾಂಕ:

ಮೈಸೂರು – ಬೆಳಗಾವಿ ವಿಶೇಷ ರೈಲು (ಸಂಖ್ಯೆ 06285): ಈ ರೈಲು ಜನವರಿ 13, 16 ಮತ್ತು 23 ರಂದು ರಾತ್ರಿ 8:40ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಬೆಳಗ್ಗೆ 10:30ಕ್ಕೆ ಬೆಳಗಾವಿ ತಲುಪಲಿದೆ.

ಬೆಳಗಾವಿ – ಮೈಸೂರು ವಿಶೇಷ ರೈಲು (ಸಂಖ್ಯೆ 06286): ಈ ರೈಲು ಜನವರಿ 15, 18 ಮತ್ತು 26 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ನಿರ್ಗಮಿಸಿ, ಮರುದಿನ ಬೆಳಗ್ಗೆ 6:15ಕ್ಕೆ ಮೈಸೂರನ್ನು ತಲುಪಲಿದೆ.

ಈ ವಿಶೇಷ ರೈಲುಗಳು ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿವೆ.

ಒಟ್ಟು 23 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ:

ಎಸಿ 2-ಟೈರ್ ಕಮ್ ಎಸಿ 3-ಟೈರ್: 1 ಬೋಗಿ

ಎಸಿ 3-ಟೈರ್: 3 ಬೋಗಿಗಳು

ಸ್ಲೀಪರ್ ಕ್ಲಾಸ್: 13 ಬೋಗಿಗಳು

ಸಾಮಾನ್ಯ ದ್ವಿತೀಯ ದರ್ಜೆ: 4 ಬೋಗಿಗಳು

ಎಸ್‌ಎಲ್‌ಆರ್/ಡಿ: 2 ಬೋಗಿಗಳನ್ನು ಅಳವಡಿಸಲಾಗಿದೆ.

ನೈಋತ್ಯ ರೈಲ್ವೆಯ ಈ ನಿರ್ಧಾರದಿಂದಾಗಿ ಮೈಸೂರು, ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಭಾಗದ ಪ್ರಯಾಣಿಕರಿಗೆ ಹಬ್ಬದ ಸಮಯದಲ್ಲಿ ಸೀಟುಗಳ ಕೊರತೆ ನೀಗಲಿದ್ದು, ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ.

Most Read

error: Content is protected !!