SHOCKING| ಪದ್ಮಾವತಿ ಎಕ್ಸ್‌ಪ್ರೆಸ್‌ನಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಪ್ರಯಾಣಿಕನ ಪ್ರಾಣಕ್ಕೆ ಕುತ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನಂತಪುರ ಜಿಲ್ಲೆಯ ಗುತ್ತಿ ರೈಲು ನಿಲ್ದಾಣದ ಬಳಿ ದುಷ್ಕರ್ಮಿಗಳು ಪ್ರಯಾಣಿಕನನ್ನು ಪದ್ಮಾವತಿ ಎಕ್ಸ್ ಪ್ರೆಸ್ ರೈಲಿನಿಂದ ತಳ್ಳಿದ ಭಯಾನಕ ಘಟನೆ ನಡೆದಿದೆ.

ಪ್ರಯಾಣಿಕ ರಮೇಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ರೈಲಿನಲ್ಲಿ ಸೀಟಿಗಾಗಿ ಜಗಳವಾಗುತ್ತಿದ್ದಾಗ ಸಹ ಪ್ರಯಾಣಿಕರನ್ನು ರಮೇಶ್‌ ಸಂತೈಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಕೋಪಗೊಂಡ ದುಷ್ಕರ್ಮಿಗಳು ರಮೇಶ್‌ನನ್ನು ರೈಲಿನಿಂದ ತಳ್ಳಿದ್ದಾರೆ.

ಗಾಯಗೊಂಡ ವ್ಯಕ್ತಿ ಅನ್ನಮಯ್ಯ ಜಿಲ್ಲೆಯ ಪೇಟಿಎಂ ಮಂಡಲದ ಕುಮ್ಮವಾರಿ ಗ್ರಾಮಕ್ಕೆ ಸೇರಿದವನು ಎಂದು ಪೊಲೀಸರು ಗುರುತಿಸಿದ್ದಾರೆ. ಕೆಳಕ್ಕೆ ಬಿದ್ದ ರಮೇಶ್‌ ಸ್ವಲ್ಪ ಸಮಯದ ಬಳಿಕ ಎಚ್ಚೆತ್ತು 108ಕ್ಕೆ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. 108 ಸಿಬ್ಬಂದಿ ಸ್ಥಳಕ್ಕಾಗಮಿಸಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!