VIRAL | ವಿಮಾನದಿಂದ ಹಾರಿದ ಪ್ರಯಾಣಿಕರು! ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಪೇನ್‌ನ ಪಾಲ್ಮಾ ಡಿ ಮಲ್ಲೋರ್ಕಾ ವಿಮಾನ ನಿಲ್ದಾಣದಲ್ಲಿ ಟೇಕ್‌ಆಫ್ ಸಿದ್ಧತೆಯಲ್ಲಿದ್ದ ರಯಾನ್ಏರ್ ಬೋಯಿಂಗ್ 737 ವಿಮಾನದಲ್ಲಿ ಸಂಭವಿಸಿದ ತುರ್ತು ಪರಿಸ್ಥಿತಿಯಿಂದ ಕನಿಷ್ಠ 18 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮ್ಯಾಂಚೆಸ್ಟರ್‌ಗೆ ಹೊರಟಿದ್ದ ಈ ವಿಮಾನದಲ್ಲಿ ಏಕಾಏಕಿ ಬೆಂಕಿಯ ಎಚ್ಚರಿಕೆ ದೀಪ ಆನ್ ಆಗಿದ್ದು, ಭೀತಿಯಲ್ಲಿ ಪ್ರಯಾಣಿಕರು ತುರ್ತು ನಿರ್ಗಮನ ಮೂಲಕ ವಿಮಾನದಿಂದ ಇಳಿಯಲು ಯತ್ನಿಸಿದ್ದಾರೆ.

ಘಟನೆ ವೇಳೆ ಹಲವರು ವಿಮಾನದ ರೆಕ್ಕೆಯ ಬದಿಯಿಂದ ನೇರವಾಗಿ ನೆಲಕ್ಕೆ ಹಾರಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಪ್ರಯಾಣಿಕರು ಆತಂಕದಿಂದ ವಿಮಾನದಿಂದ ಕೆಳಗೆ ಹಾರುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತಿದೆ.

ಈ ಘಟನೆ ನಡೆದ ತಕ್ಷಣವೇ ನಾಲ್ಕು ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ದಳ ಮತ್ತು ಸಿವಿಲ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರ ಪೈಕಿ ಆರು ಜನರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಯಾನ್ಏರ್ ಸಂಸ್ಥೆ, ಬೆಂಕಿಯ ಎಚ್ಚರಿಕೆ ಸುಳ್ಳು ಎಂದು ಹೇಳಿದ್ದಾರೆ. ಆದರೂ, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿತ್ತು. ಗಾಳಿ ತುಂಬಬಹುದಾದ ಸ್ಲೈಡ್‌ಗಳ ಮೂಲಕ ಸ್ಥಳಾಂತರ ನಡೆಸಿ, ಬಳಿಕ ಅವರನ್ನು ಟರ್ಮಿನಲ್‌ಗೆ ಕರೆದೊಯ್ಯಲಾಯಿತು. ಸಂಸ್ಥೆ ಘಟನೆಯಿಂದ ಉಂಟಾದ ತೊಂದರೆಗೆ ಕ್ಷಮೆ ಕೇಳಿದ್ದು, ತಾಂತ್ರಿಕ ಪರಿಶೀಲನೆ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!