ಹೊಸದಿಗಂತ ವರದಿ, ವಿಜಯನಗರ:
ವಿಜಯ ದಶಮಿ ಹಬ್ಬ ಹಿನ್ನೆಲೆಯಲ್ಲಿ ನಗರದಲ್ಲಿ ಆರ್ ಎಸ್ ಎಸ್ ನ ಗಣವೇಷಧಾರಿ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ಭಾನುವಾರ ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊಸಪೇಟೆ ನಗರದಿಂದ ಹಮ್ಮಿಕೊಂಡಿದ್ದ ಆಕರ್ಷಕ ಪಥ ಸಂಚಲನ, ಹಂಪಿ ರಸ್ತೆಯ ಹಳೆ ವಾಸವಿ ಶಾಲೆ, ಥಿಯಾಸಾಫಿಕಲ್ ಕಾಲೇಜು ಎದುರು ನಿಂದ ಪ್ರಾರಂಭಗೊಂಡಿತು. ಅಲ್ಲಿಂದ ಮಲ್ಲಿಗೆ ಹೋಟೆಲ್, ಸಾರಿಗೆ ಬಸ್ ಡಿಪೋ ಸರ್ಕಲ್, ಜಗಳಿಕಟ್ಟಿ ರಾಯರ ಪ್ರದೇಶ, (ವಿಜಯಾ ಟಾಕೀಸ್), ಲಕ್ಷ್ಮೀ ಮೆಡಿಕಲ್ (ಮೇನ್ ಬಜಾರ್), ಪಾದಗಟ್ಟೆ ಆಂಜಿನೇಯ ದೇವಾಲಯ, ಮಹಾತ್ಮ ಗಾಂಧಿ ವೃತ್ತ, ಪುಣ್ಯ ಮೂರ್ತಿ ಸರ್ಕಲ್, ಸಿದ್ದಿ ವಿನಾಯಕ ದೇವಾಲಯ, ಕಾಮಧೇನು ಸ್ವೀಟ್ಸ್, ಬಿಡಿಸಿಸಿ ಬ್ಯಾಂಕ್, ಪುನೀತ್ ರಾಜ್ ಕುಮಾರ್ ಸರ್ಕಲ್, ರಾಣಿ ಪೇಟೆ, ಎಸ್ ವಿಕೆ ಬಸ್ ನಿಲ್ದಾಣ, ಹಂಪಿ ರಸ್ತೆ ಮೂಲಕ, ಹಳೆ ವಾಸವಿ ಶಾಲೆ, ಥಿಯಾಸಾಪಿಕಲ್ ಕಾಲೇಜು ತಲುಪಿತು. ನಗರದ ದಾರಿಯುದ್ದಕ್ಕೂ ಬಹುತೇಕ ಎಲ್ಲ ಮನೆಗಳ ಎದುರು ತಾಯಂದಿರು ರಸ್ತೆಗಳಿಗೆ ರಂಗೋಲಿ ಬಿಡಿಸಿ, ಪುಷ್ಪಗಳೊಂದಿಗೆ ಅಲಂಕರಿಸಿ ಸ್ವಾಗತಿಸಿದರು. ಪಥ ಸಂಚಲನ ಸಾಗುತ್ತಿದ್ದಂತೆ ನಾಗರಿಕರು ಪುಷ್ಪಗಳನ್ನು ಸಮರ್ಪಿಸಿದರು.
ನಗರದ ಸುಮಾರು 380ಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂ ಸೇವಕರು ಪಥ ಸಂಚಲನದಲ್ಲಿ ಭಾಗವಹಿಸಿ ಗಮನಸೆಳೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ್ ಕಾರ್ಯವಾಹ ಕೇಶವ್ ಜೀ ಅವರು ಬೌದ್ದಿಕ್ ನಡೆಸಿಕೊಟ್ಟರು.