ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಾರುಖ್ ಖಾನ್ ಅಭಿನಯದ ಜವಾನ್ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಚಿತ್ರಮಂದಿರ ಹೌಸ್‌ಫುಲ್ ಆಗಿತ್ತು. ರಾಜಧಾನಿ ಬೆಂಗಳೂರಿನಲ್ಲಿಯೇ ಬರೋಬ್ಬರಿ 900 ಶೋ ಏರ್ಪಾಡಾಗಿತ್ತು.
ಅಟ್ಲೀ ನಿರ್ದೇಶನದ ಜವಾನ್ ಮೊದಲ ದಿನವೇ 104 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ 70, ತೆಲುಗು 14 ಹಾಗೂ ತಮಿಳಿನಲ್ಲಿ 21 ಕೋಟಿ ರೂಪಾಯಿ ಕಮಾಯಿ ಮಾಡಿದೆ.
ಮೂರ್ನಾಲ್ಕು ಡಿಫರೆಂಟ್ ಲುಕ್‌ನಲ್ಲಿ ಎಸ್‌ಆರ್‌ಕೆ ಕಾಣಿಸಿದ್ದು, ಜನರು ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ನಾಳೆ ಸಂಜೆಯಿಂದ ವೀಕೆಂಡ್ ಇರುವ ಕಾರಣ ಸಿನಿಮಾ ಕಲೆಕ್ಷನ್ ಇನ್ನೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.