ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಜ್ಯೇಷ್ಠ ಕಾರ್ಯಕರ್ತರಾದ ಪ್ರೊ.ಪಿ.ವಿ.ಕೃಷ್ಣಭಟ್ಟರ ಕುರಿತಾದ ಪಥದರ್ಶಿ ಪುಸ್ತಕ ಲೋಕಾರ್ಪಣೆ ಸಮಾರಂಭ ಶನಿವಾರ ಬೆಂಗಳೂರಿನ ಗಾಂಧಿನಗರದ ಅರಮನೆ ರಸ್ತೆಯಲ್ಲಿರುವ ಭಾರತೀಯ ಸ್ಕೌಟ್ಸ್ ಮತ್ತ ಗೈಡ್ಸ್ ನ ರಾಜ್ಯ ಮುಖ್ಯ ಕಚೇರಿಯಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಿರಿಯ ಪತ್ರಕರ್ತ ಹಾಗೂ ಲೇಖಕ ದು.ಗು.ಲಕ್ಷ್ಮಣ, ಕೇಂದ್ರ ಸಚಿವ ವಿ ಮುರಳೀಧರನ್, ಹಿರಿಯ ರಾಜಕಾರಿಣಿ ಪಿ.ಜಿ.ಆರ್. ಸಿಂಧಿಯಾ, ಅದಮ್ಯಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.