ಸಂತರ ಪ್ರಬಲವಾದ ಅಸ್ತ್ರವೇ ಸಹನೆ: ಮುರುಘಾ ಶ್ರೀ

ಹೊಸ ದಿಗಂತ ವರದಿ,ದಾವಣಗೆರೆ:

ಶರಣರು, ಸ್ವಾಮೀಜಿಗಳು ಮತ್ತು ಸಂತರ ಪ್ರಬಲವಾದ ಅಸ್ತ್ರವೇ ಸಹನೆ. ಆರೋಪವನ್ನು ಅಖಂಡ ಸಹನೆಯಿಂದಲೇ ಎದುರಿಸುತ್ತಿದ್ದೇನೆ. ಸತ್ಯಕ್ಕೆ ಜಯ ಸಿಗುವ ನಿರೀಕ್ಷೆಯಿದೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಸೋಮವಾರ ಸಂಜೆ ನಗರದ ಶಿವಯೋಗಾಶ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹನೆಯಿಂದ ಎಂತಹ ಆಪತ್ತನ್ನಾದರೂ ಗೆಲ್ಲಬಹುದು, ಎಲ್ಲವನ್ನೂ ಸಹಿಸಬಹುದು. ತೇಜೋವಧೆಯನ್ನೂ ಸಹನೆಯಿಂದ ತೆಗೆದುಕೊಳ್ಳಬೇಕು. ಪ್ರಕರಣ ನ್ಯಾಯಾಲಯದಲ್ಲಿದ್ದು, ಈಗಲೇ ಈ ಬಗ್ಗೆ ಮಾತನಾಡುವುದಿಲ್ಲ ಎಂದರು.

ಜೈಲಿನಲ್ಲಿದ್ದಾಗ ಸುಮಾರು 350 ಪುಸ್ತಕಗಳನ್ನು ಓದಿದ್ದೇನೆ. ಜ್ಞಾನ ಸಂಪಾದನೆಗೆ ಹೆಚ್ಚಿನ ಒತ್ತು ಕೊಟ್ಟು ಸಮಯವನ್ನು ಸದ್ವಿವಿನಿಯೋಗ ಮಾಡಿಕೊಂಡಿದ್ದೇನೆ. ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿದಂತೆ 5 ಪುಸ್ತಕಗಳನ್ನು ಜೈಲಿನಲ್ಲೇ ಬರೆದಿದ್ದೇನೆ. ಸದ್ಯಕ್ಕೆ ದಾವಣಗೆರೆ ಶಿವಯೋಗಾಶ್ರಮದಲ್ಲೇ ವಾಸ್ತವ್ಯ ಹೂಡಲಿದ್ದು, ಭಕ್ತರನ್ನು ಸಹ ಭೇಟಿಯಾಗುತ್ತೇವೆ ಎಂದು ಅವರು ತಿಳಿಸಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಎಸ್.ಓಂಕಾರಪ್ಪ, ಬಾಡದ ಆನಂದರಾಜ್ ಸೇರಿದಂತೆ ಮಠದ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!