ಪವಿತ್ರಾ ಗೌಡಗೆ ಸಿಗದ ರಿಲೀಫ್: ಆಗಸ್ಟ್.31ಕ್ಕೆ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್;

ರೆಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರ ಇಂದು ನಡೆದಿದೆ . ವಾದ-ಪ್ರತಿ ವಾದವನ್ನು ಆಲಿಸಿದ ನ್ಯಾಯಾಲಯವು, ಅರ್ಜಿಯ ವಿಚಾರಣೆಯ ಬಳಿಕ ಆದೇಶವನ್ನು ಆಗಸ್ಟ್.31ಕ್ಕೆ ಕಾಯ್ದಿರಿಸಿದೆ.

ಮೊದಲು ವಾದ ಮಂಡಿಸಿದ ಸರ್ಕಾರಿ ವಕೀಲ ಪ್ರಸನ್ನ ಕುಮಾರ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕೆಲವು ವಿಷಯಗಳನ್ನು ಬಿಚ್ಚಿಟ್ಟರು. ಅಲ್ಲದೆ ಪ್ರಕರಣದಲ್ಲಿ ಪವಿತ್ರಾ ಗೌಡರ ಪಾತ್ರವನ್ನು ವಿವರಿಸಿದರು. ಆರೋಪಿ 3, ಪವನ್ ಮೊಬೈಲ್​ ಮೂಲಕ ರೇಣುಕಾ ಸ್ವಾಮಿ ಜೊತೆಗೆ ಪವಿತ್ರಾ ಮಾತನಾಡಿದ್ದರು ಎಂಬ ಅಂಶವನ್ನು ನ್ಯಾಯಾಲಯಕ್ಕೆ ಹೇಳಿದ್ದಾರೆ.

ಬಳಿಕ ಪವಿತ್ರಾ ಗೌಡ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸೆಬಾಸ್ಟಿಯನ್, ಪವಿತ್ರಾಗೌಡ ಗೂ ದರ್ಶನ್​ಗೆ ಒಂದು ರೀತಿಯ ಸಂಬಂಧ ಇರಬಹುದು ನಿಜವಿರಬಹುದು. ಆದರೆ ರೇಣುಕಾ ಸ್ವಾಮಿ ಕೊಲೆಯಲ್ಲ ‌ಪವಿತ್ರಾಗೌಡ ಯಾವುದೇ ಪಾತ್ರ ವಹಿಸಿಲ್ಲ. ರೇಣುಕಾ ಸ್ವಾಮಿ ಇನ್ ಸ್ಟಾಗ್ರಾಮ್ ನಲ್ಲಿ ಅಸಭ್ಯ ಫೋಟೋ ಕಳುಹಿಸಿದ್ದಾನೆ. ಸಹಜವಾಗೇ ಈ ವಿಷಯವನ್ನು ಸಹಾಯಕನಾಗಿರುವ ಎ 3 ಪವನ್​ಗೆ ಪವಿತ್ರಾಗೌಡ ತಿಳಿಸಿದ್ದಾಳೆ. ಎ 3 ಪವನ್, ದರ್ಶನ್ ಗೆ ವಿಷಯ ತಿಳಿಸಿದ್ದಾನೆ.ರೇಣುಕಾ ಸ್ವಾಮಿ ಕೊಲೆ ಆದ ದಿನವೂ ಸಹ ದರ್ಶನ್ ಆಕೆಯನ್ನು ಷೆಡ್ ಕರೆದೊಯ್ದಿದ್ದಾನೆ. ಪವಿತ್ರಾಗೌಡ, ದರ್ಶನ್ ಜೊತೆಯಲ್ಲಿ ಹೋಗಿದ್ದರೂ ಸಹ ಕೊಲೆಯಲ್ಲಿ ಭಾಗಿಯಾಗಿಲ್ಲ. ಆಕೆ ಹಲ್ಲೆ ನಡೆಸಿದ್ದಾಳೆಂದೂ ಆರೋಪವಿಲ್ಲ. ‌ಹೀಗಿರುವಾಗ ಕೊಲೆಯಲ್ಲಿ ಪವಿತ್ರಾಗೌಡ ಪಾತ್ರವೇನು? ಎಂದು ವಕೀಲ ಸೆಬಾಸ್ಟಿಯನ್ ಪ್ರಶ್ನಿಸಿದರು.

ಪವಿತ್ರಾಗೌಡ ಕಪಾಳಮೋಕ್ಷ ನಡೆಸಿದ್ದರೆಂದು ಹೇಳಿದ್ದಾರೆ. ಆದರೆ ಕಪಾಳಮೋಕ್ಷದಿಂದ ಸಾವಾಗಿದೆ ಎಂಬ ವರದಿಯಿಲ್ಲ. ಎದೆಗೂಡಿನ‌ ಮೂಳೆ ಮುರಿದು ಅದು ಶ್ವಾಸಕೋಶಕ್ಕೆ ಚುಚ್ಚಿ ಸಾವಾಗಿದೆ. ಕಪಾಳಮೋಕ್ಷ ದಿಂದ ಸಾವಾಗಿರಲು ಸಾಧ್ಯವೇ ಇಲ್ಲ. ಎದೆಗೂಡಿನ‌ ಮೂಳೆ ಮುರಿತಕ್ಕೂ ಪವಿತ್ರಾಗೌಡಗೂ ಯಾವುದೇ ಸಂಬಂಧ ಇಲ್ಲ. ಪವಿತ್ರಾಗೌಡ ಕೂಡಾ ಮಹಿಳೆಯಾಗಿದ್ದು ಅಪ್ರಾಪ್ತ ಮಗಳಿದ್ದಾಳೆಆಕೆಗೆ‌ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.

ಪವಿತ್ರಾ ಗೌಡ ಮಾತ್ರವೇ ಅಲ್ಲದೆ, ಸ್ಟೋನಿ ಬ್ರೂಕ್ ಮಾಲೀಕ ಎ10 ಆರೋಪಿ ವಿನಯ್, ಕಾರು ಚಾಲಕ ಅನುಕುಮಾರ್, ಕೇಶವಮೂರ್ತಿ ಅವರುಗಳು ಸಹ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ಪರವಾಗಿಯೂ ಸಹ ವಕೀಲರು ವಾದ ಮಂಡಿಸಿದರು.ವಾದ-ಪ್ರತಿ ವಾದವನ್ನು ಆಲಿಸಿದ ಕೋರ್ಟ್ ಎಲ್ಲರ ಜಾಮೀನು ಅರ್ಜಿಯ ಆದೇಶವನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!