ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಪ್ರಕರಣದ ಎಲ್ಲಾ 17 ಆರೋಪಿಗಳು ಇಂದು 57ನೇ CCH ಕೋರ್ಟ್‌ಗೆ ಹಾಜರಾಗಿದ್ದರು.
ದೋಷಾರೋಪ ದಾಖಲಿಸುವ ಹಿನ್ನೆಲೆಯಲ್ಲಿ ಎ1 ಪವಿತ್ರಾಗೌಡ, ಎ2 ದರ್ಶನ್ ಸೇರಿ ಎಲ್ಲಾ 17 ಆರೋಪಿಗಳಿಗೂ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.
ಈ ಹಿನ್ನೆಲೆ ಎಲ್ಲಾ ಆರೋಪಿಗಳು ಇಂದು ಕೋರ್ಟ್‌ಗೆ ಹಾಜರಾಗಿದ್ದರು. ದರ್ಶನ್ ಅವರು ಕಪ್ಪು ಟೀ ಶರ್ಟ್‌ನಲ್ಲಿ ಕೋರ್ಟ್‌ಗೆ ಆಗಮಿಸಿದ್ದರು. ಬಿಳಿ ಸೀರೆಯಲ್ಲಿ ನಟಿ ಪವಿತ್ರಾಗೌಡ ಅವರು ಕೋರ್ಟ್‌ಗೆ ಬಂದಿದ್ದರು.
ಕೋರ್ಟ್ ಹಾಲ್ ಒಳಗೆ ಎ1 ಪವಿತ್ರಾಗೌಡ ನಿಂತಿದ್ದರು. ಮೊದಲಿಗೆ ದರ್ಶನ್ ಅವರು ಕೋರ್ಟ್ ಒಳಗೆ ಬಾರದೆ ಹೊರಗೆ ನಿಂತಿದ್ದರು. ಪವಿತ್ರಗೌಡ ಅವರಿಂದ ದೂರ ನಿಂತಿದ್ದ ದರ್ಶನ್ ಅವರನ್ನು ನೋಡಿದ ನ್ಯಾಯಾಧೀಶರು 1ನೇ ಆರೋಪಿತೆ ಪಕ್ಕ ನಿಲ್ಲಿ ಎಂದು ಸೂಚನೆ ನೀಡಿದರು. ಆಮೇಲೆ ನ್ಯಾಯಾಧೀಶರು ಆರೋಪಿಗಳ ಹಾಜರಾತಿ ತೆಗೆದುಕೊಂಡರು.
ವಿಚಾರಣೆ ಬಳಿಕ ಕೋರ್ಟ್ ಹಾಲ್‌ನಿಂದ ಹೊರಟ ದರ್ಶನ್ ಅವರು ಪವಿತ್ರಾಗೌಡ ಅವರ ಕೈ ಹಿಡಿದುಕೊಂಡು ಹೊರಗೆ ಬಂದಿದ್ದಾರೆ. ಕೋರ್ಟ್ ಹಾಲ್ ಒಳಗೆ ದರ್ಶನ್ ಗಪ್ ಚುಪ್ ಆಗಿದ್ದರು. ಆದರೆ ಲಿಫ್ಟ್‌ನಲ್ಲಿ ನಟ ದರ್ಶನ್‌ಗೆ ಪವಿತ್ರಾಗೌಡ ಅವರು ದುಂಬಾಲು ಬಿದ್ದು ಮಾತನಾಡಿಸಿದರು. ಕೈ ಹಿಡಿದು ಫೋನ್ ನಂಬರ್ ನೀಡುವಂತೆ ಒತ್ತಾಯ ಮಾಡಿದರು. ಕೊನೆಗೆ ದರ್ಶನ್ ಅವರು ತನ್ನ ಫೋನ್ ನಂಬರ್ ಅನ್ನ ಡಯಲ್ ಮಾಡಿಕೊಟ್ಟಿದ್ದಾರೆ.