ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಪವಿತ್ರಾ ಜಯರಾಮ್ ಅಪಘಾತ ಪ್ರಕರಣದಲ್ಲಿ ತಿರುವು ಸಿಕ್ಕಿದೆ. ಪವಿತ್ರಾ ಗೆಳೆಯ, ಸೀರಿಯಲ್ ನಟ ಚಂದು (Chandu) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇದೀಗ ಆತ್ಮಹತ್ಯೆಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದರ ಬೆನ್ನಲ್ಲೇ ಚಂದ್ರಕಾಂತ್ ಅವರು ಶಿಲ್ಪಾ ಪ್ರೇಮಾ ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಮಕ್ಕಳಿದ್ದರು. ಆದಾಗ್ಯೂ ಪವಿತ್ರಾ ಜೊತೆ ಪ್ರೀತಿಯಲ್ಲಿ ಇದ್ದರು. ಈಗ ಚಂದು ಅವರ ಪತ್ನಿ ಶಿಲ್ಪಾ ಈ ಬಗ್ಗೆ ಮಾತನಾಡಿದ್ದಾರೆ.
ನಾನು ಮತ್ತು ಚಂದ್ರಕಾಂತ್ ಅವರು ಪ್ರೀತಿಸಿ ಮದುವೆಯಾಗಿ 11 ವರ್ಷಗಳ ಸಂಸಾರ ನಡೆಸಿದ್ದವು. ನಮ್ಮ ಹಿರಿಯರನ್ನು ಒಪ್ಪಿಸಿ 2015ರಲ್ಲಿ ಮದುವೆಯಾಗಿ ತುಂಬಾ ಪ್ರೀತಿಯಿಂದ ಸಂಸಾರ ನಡೆಸುತ್ತಿದ್ದೆವು. ನಮಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ, ತ್ರಿನಯನಿ ಧಾರಾವಾಹಿಯಲ್ಲಿ ನನ್ನ ಗಂಡನಿಗೆ ಚಾನ್ಸ್ ಸಿಕ್ಕಿದ್ದೇ ನನ್ನ ಕುಟುಂಬಕ್ಕೆ ನರಕವಾಯಿತು. ಈ ಧಾರಾವಾಹಿಯ ಖಳನಾಯಕಿ ಪವಿತ್ರಾ ಜಯರಾಂ ನಮ್ಮ ಸಂಸಾರಕ್ಕೆ ನಿಜವಾಗಿಯೂ ಖಳನಾಯಕಿಯಾದಳು. ಸ್ವತಃ ಪವಿತ್ರಾ ಜಯರಾಂ ನನಗೆ ಕರೆ ಮಾಡಿ ಪತಿ ಚಂದ್ರಕಾಂತನನ್ನು ಮರೆತು ಬಿಡಿ ಎಂದು ಬೆದರಿಕೆ ಹಾಕುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಪವಿತ್ರಾ ಜಯರಾಂ ಅವರ ಸಂಪರ್ಕ ಹೊಂದಿದ ನನ್ನ ಪತಿ ಚಂದ್ರಕಾಂತ್ ಅವರು, ಧಾರಾವಾಹಿ ಶೂಟಿಂಗ್ ಮುಗಿಸಿಕೊಂಡು ಬರುವಾಗ ಪ್ರತಿದಿನ ಕುಡಿದು ಬಂದು ನನಗೆ ಚಿತ್ರಹಿಂಸೆ ಕೊಡಲು ಆರಂಭಿಸಿದರು. ನಂತರ, ಪ್ರೀತಿಸಿ ಮದುವೆಯಾದ ನನ್ನನ್ನು, ಮಕ್ಕಳನ್ನು ಹಾಗೂ ಇಡೀ ಕುಟುಂಬದ ಬಗ್ಗೆ ಕಾಳಜಿ ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಇನ್ನು ಅವರಿಬ್ಬರ ಸಂಬಂಧದಿಂದ ನಮ್ಮ ಸಂಸಾರ ಹಾಳಾಗುತ್ತಿರುವುದನ್ನು ನನಗೆ ಸಹಿಸಲಾಗದೇ ಒಮ್ಮೆ ನಾನು ಅವಳ ಮಗನನ್ನು ಭೇಟಿಯಾದೆ. ಆದರೆ, ಅವರ ಮಗ ಕೂಡ ಅವರವರ ಜೀವನ ಅವರ ಇಷ್ಟಕ್ಕೆ ಬಿಟ್ಟದ್ದಾಗಿದೆ. ನನಗೂ ವಾರಿಬ್ಬರ ಸಂಬಂಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿ ಕಳುಹಿಸಿದ್ದರು ಎಂಬುದನ್ನು ಶಿಲ್ಪಾ ಹೇಳಿಕೊಂಡಿದ್ದಾರೆ.
ನನ್ನ ಪತಿ ಚಂದ್ರಕಾಂತ್ ಅವರು ಪವಿತ್ರಾ ಅವರ ಸಂಬಂಧದಲ್ಲಿ ಸಿಲುಕಿದ ನಂತರ ಮನೆಯಲ್ಲಿದ್ದರೂ ಕಟುಂಬಕ್ಕೆಂದು ಸಮಯ ಕೊಡುತ್ತಿರಲಿಲ್ಲ. ಅವರ ಮೇಲೆಯೇ ಫೋಕಸ್ ಮಾಡುತ್ತಾ ಅವರಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು. ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀಯಾ’ ಎಂದೆಲ್ಲಾ ಕೇಳುತ್ತಿದ್ದರು. ಮುಂದುವರೆದು ಅವರಿಬ್ಬರು ಕೆಟ್ಟದಾಗಿ ಮಾತನಾಡಿಕೊಳ್ಳುವುದನ್ನು ನನಗೆ ಕೇಳಿಸಿಕೊಳ್ಳಲೂ ಆಗುತ್ತಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ನನಗೆ ಹೊಡೆದು ಹಿಡಿಶಾಪ ಹಾಕುತ್ತಿದ್ದನು ಎಂದು ಹೇಳಿಕೊಂಡಿದ್ದಾಳೆ.
ಇನ್ನು ಪವಿತ್ರಾ ಜಯರಾಂ ಅವರಿಗೆ ಅಪಘಾತವಾದ ಸುದ್ದಿಯ ಬೆನ್ನಲ್ಲಿಯೇ ಚಂದ್ರಕಾಂತ್ ಕೂಡ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದರು. ಚಂದ್ರಕಾಂತ್ ಚಿಕಿತ್ಸೆ ಪಡೆಯುವ ವೇಳೆ ನಮ್ಮೆದುರಿಗೆ ಪವಿತ್ರಾಳ ಬಗ್ಗೆ ಮಾತನಾಡುತ್ತಾ ಅಳಲು ತೋಡಿಕೊಂಡಿದ್ದರು. ಇನ್ನು ಪವಿತ್ರಾ ಸಾವಿನ ನಂತರವಾದರೂ ಜೀವನವನ್ನು ಅರ್ಥ ಮಾಡಿಕೊಂಡು ನಮ್ಮೊಂದಿಗೆ ಮುಂದಿನ ಸುಖ ಜೀವನ ಕಳೆಯುತ್ತಾರೆ ಎಂದು ಕೊಂಡಿದ್ದೆವು. ಆದರೆ, ಈಗ ಅವರು ಆತ್ಮಹತ್ಯೆಗೆ ಶರಣಾಗಿದ್ದು ನಮಗೆ ಜೀವನದ ಮೇಲಿನ ನಂಬಿಕೆಯೇ ಹೊರಟು ಹೋಗಿದೆ. ಪವಿತ್ರಾ ಅವರ ಜೀವನದಲ್ಲಿ ಬಂದಾಗಿನಿಂದ ತಮ್ಮ ಸಂಸಾರ, ಕುಟುಂಬ ಮತ್ತು ಜೀವನವ್ನೇ ಹಾಳು ಮಾಡಿಕೊಂಡರು ಎಂದು ಮೃತ ಚಂದ್ರಕಾಂತ್ ಪತ್ನಿ ಶಿಲ್ಪಾ ಕಣ್ಣೀರಿಟ್ಟಿದ್ದಾರೆ.