ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕೋರ್ಟ್ ಹಾಲ್ ನಲ್ಲಿ ದರ್ಶನ್ ಅವರನ್ನು ನೋಡಿ ಪವಿತ್ರಾ ಗೌಡ ಭಾವುಕರಾಗಿದ್ದಾರೆ.
ಇಂದು 57ನೇ ಸಿಸಿಹೆಚ್ ಕೋರ್ಟ್‌ಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು. ಆರು ತಿಂಗಳ ನಂತರ ಕೋರ್ಟ್ ನಲ್ಲಿ ದರ್ಶನ್ ಅವರನ್ನು ಕಂಡ ಪವಿತ್ರಾ ಗೌಡ ಭಾವುಕರಾದರು. ಈ ವೇಳೆ ದರ್ಶನ್ ಪವಿತ್ರಾ ಅವರ ಬೆನ್ನುತಟ್ಟಿ ಸಂತೈಸಿ ಕೆಲ ಕ್ಷಣ ಮಾತನಾಡಿದ್ದಾರೆ.
ಎಲ್ಲಾ ಆರೋಪಿಗಳು ಹಾಲ್‌ಗೆ ಬಂದ ನಂತರ ನ್ಯಾಯಾಧೀಶರು ಹಾಜರಿ ಪಡೆದರು. ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿದ್ದಾರೆ.