ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ಆರೋಪಿ ಪವಿತ್ರಾ ಗೌಡ, ಪ್ರಯಾಗರಾಜ್ನ 2025ರ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ, ಮೌನಿ ಅಮಾವಾಸ್ಯೆಯ ದಿನ ಶಾಹಿ ಸ್ನಾನ ಮಾಡಿದ್ದಾರೆ.
ಪವಿತ್ರಾ ಗೌಡ ಅವರು ಮಹಾ ಕುಂಭಮೇಳಕ್ಕೆ ಸ್ನೇಹಿತೆಯರೊಂದಿಗೆ ಭೇಟಿ ನೀಡಿದ್ದಾರೆ. ಮೌನಿ ಅಮಾವಾಸ್ಯೆ ದಿನವೇ ಕುಂಭಮೇಳಕ್ಕೆ ತೆರಳಿದ್ದು ಅಲ್ಲಿ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನವನ್ನು ಮಾಡಿದ್ದಾರೆ.
ದೇವರಿಗೆ ಪೂಜೆ ಸಲ್ಲಿಕೆ ಮಾಡಿದ ಬಳಿಕ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ಪ್ರಯಾಗರಾಜ್ಗೆ ಭೇಟಿ ನೀಡಿದ್ದ ವೇಳೆ ಪವಿತ್ರಾ ಗೌಡ ಅವರು ಬೋಟ್ನಲ್ಲಿ ಜಾಲಿಯಾಗಿ ಹೋಗಿ ಎಂಜಾಯ್ ಮಾಡಿದ್ದಾರೆ. ಸದ್ಯ ಈ ಸಂಬಂಧದ ವಿಡಿಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕಿರುವುದಕ್ಕೆ ನಾನೇ ಧನ್ಯಾಳು. ಎಲ್ಲಾ ನೆಗೆಟಿವ್ನಿಂದ ಮುಕ್ತನಾಗಿದ್ದೇನೆ ಎಂದು ನಂಬುತ್ತೇನೆ ಎಂದು ಬರೆದುಕೊಂಡಿದ್ದಾರೆ.