ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ, ಸೊಳ್ಳೆ ಕಾಟಕ್ಕೆ ಬೇಸತ್ತಿದ್ದಾರೆ.
ಐಷಾರಾಮಿ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡ ಸೊಳ್ಳೆಯನ್ನು ನೋಡಿ ವರ್ಷಗಳೇ ಆಗಿರಬಹುದು, ಆದರೆ ಇದೀಗ ಹಗಲು ರಾತ್ರಿ ಎನ್ನದೇ ಸೊಳ್ಳೆಗಳು ಕಚ್ಚಿ ಹಿಂಸೆ ನೀಡುತ್ತಿವೆ. ಮೆತ್ತನೆಯ ಬೆಡ್‌ಮೇಲೆ ಮಲಗುತ್ತಿದ್ದ ಪವಿತ್ರಾಗೆ ಬರೀ ಚಾಪೆ ಮೇಲೆ ನಿದ್ದೆ ಬರುತ್ತಿಲ್ಲ.
ಸ್ವಲ್ಪ ನಿದ್ದೆ ಬಂತೂ ಎಂದರೆ ಸೊಳ್ಳೆಗಳ ಕಾಟಕ್ಕೆ ಎಚ್ಚರ ಆಗುತ್ತಿದೆ. ಜೈಲಿನ ಊಟ ಹಿಡಿಸುತ್ತಿಲ್ಲ, ಒಲ್ಲದ ಮನಸ್ಸಿನಿಂದ ಅಲ್ಪ ಸ್ವಲ್ಪ ಊಟ ಮಾಡಿದ್ದಾರೆ.ಯಾರ ಜೊತೆಗೂ ಮಾತನಾಡದೆ ಒಬ್ಬಂಟಿಯಾಗಿ ಕುಳಿತು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.