ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಅಭಿನಯದ ಬ್ರೋ ಚಿತ್ರವು ಇತ್ತೀಚೆಗೆ ಜುಲೈ 28 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸನ್ನು ಕಂಡಿದೆ. ಮೊದಲ ದಿನವೇ ಯಾರೂ ನಿರೀಕ್ಷಿಸದ ರೇಂಜ್‌ನಲ್ಲಿ ಬ್ರೋ ಚಿತ್ರ ವಿಶ್ವದಾದ್ಯಂತ ಒಟ್ಟು 44 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಬ್ರೋ ಸಿನಿಮಾದ ಎರಡನೇ ದಿನದಂದು ಹೈದರಾಬಾದ್‌ನ ಲಂಗರ್ ಹೌಸ್‌ನಲ್ಲಿರುವ ಅಲಂಕಾರ್ ಥಿಯೇಟರ್‌ನಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಪುಂಡಾಟ ಮೆರೆದು. ಥಿಯೇಟರ್ ಅನ್ನು ಹಾನಿಗೊಳಿಸಿದ್ದಾರೆ.
ಬಿಯರ್ ಬಾಟಲ್ ಗಳೊಂದಿಗೆ ಥಿಯೇಟರ್ ಒಳಗೆ ಬಂದು ಮದ್ಯ ಸೇವಿಸಿ ಬಾಟಲಿಗಳನ್ನು ಥೀಯೇಟರ್ ಗೋಡೆಗಳಿಗೆ ಎಸೆದಿದ್ದಾರೆ. ನಂತರ ಪರಸ್ಪರ ಬಿಯರ್ ಬಾಟಲಿಗಳಿಂದ ಹೊಡೆದಾಡಿಕೊಂಡಿದ್ದು, ಜಗಳ ತಡೆಯಲು ಬಂದ ಥಿಯೇಟರ್ ಸಿಬ್ಬಂದಿ ಮೇಲೆ ಪವನ್ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ. ಬಳಿಕ ಥಿಯೇಟರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ ಥಿಯೇಟರ್ ನಲ್ಲಿ ಕುಡಿದು ಜಗಳವಾಡುತ್ತಿದ್ದ ಯುವಕರನ್ನು ಬಂಧಿಸಿದ್ದಾರೆ. ಥಿಯೇಟರ್ ಕುರ್ಚಿಗಳು, ಸ್ಕ್ರೀನ್‌ಗೆ ಹಾನಿಯಾಗಿದ್ದು, ಮಾಲೀಕರು ಚಿಂತೆಗೀಡಾಗಿದ್ದಾರೆ.